ಜರ್ಮನಿಯಿಂದ ಹೊರಡಲು ಸಿದ್ಧವಾದ ಪ್ರಜ್ವಲ್ ರೇವಣ್ಣ: ಮಧ್ಯರಾತ್ರಿ ಬೆಂಗಳೂರು ತಲುಪುವ ಸಾಧ್ಯತೆ

prajwal revanna
30/05/2024

ಬೆಂಗಳೂರು:   ಹಾಸನದಲ್ಲಿ ಕಳೆದ ತಿಂಗಳು ಸದ್ದು ಮಾಡಿದ್ದ ಲೈಂಗಿಕ ಕಿರುಕುಳ ಪ್ರಕರಣದ ನಡುವೆಯೇ ವಿದೇಶಕ್ಕೆ ಪರಾರಿಯಾಗಿದ್ದ ಸಂಸದ ಪ್ರಜ್ವಲ್‌ ರೇವಣ್ಣ ಗುರುವಾರ ಮಧ್ಯರಾತ್ರಿಯೇ ಬೆಂಗಳೂರಿಗೆ ಬರುವುದು ಖಚಿತವಾಗಿದೆ.

ಜರ್ಮನಿಯ ಮೂನಿಚ್‌ ನಗರದಿಂದ ಬೆಂಗಳೂರಿನ ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಜ್ವಲ್‌ ರೇವಣ್ಣ ಆಗಮಿಸುವ ಮಾಹಿತಿಯಿದ್ದು, ಪೊಲೀಸರು ಅಲರ್ಟ್‌ ಆಗಿದ್ದಾರೆ.

ಮುನಿಚ್‌ ನಿಂದ ಬೆಂಗಳೂರಿಗೆ ಸುಮಾರು 9 ಗಂಟೆ ಪ್ರಯಾಣಿಸಬೇಕಾಗಿದ್ದು,  ರಾತ್ರಿ 2ರಿಂದ 3 ಗಂಟೆ ಹೊತ್ತಿಗೆ ಪ್ರಜ್ವಲ್ ಬೆಂಗಳೂರಿಗೆ ಆಗಮಿಸಬಹುದು ಎನ್ನಲಾಗುತ್ತಿದೆ.

ಪ್ರಜ್ವಲ್‌ ರೇವಣ್ಣ ಅವರ ವಿಚಾರಣೆಗೆ ಈಗಾಗಲೇ ವಿಶೇಷ ತನಿಖಾ ತಂಡ ನೊಟೀಸ್‌ ಕೂಡ ಜಾರಿ ಮಾಡಿದೆ. ಅಲ್ಲದೇ ಲುಕ್‌ ಔಟ್‌ ನೊಟೀಸ್‌ ಜಾರಿ ಮಾಡಿತ್ತು.ಬಳಿಕ  ಬ್ಲೂಕಾರ್ನರ್‌ ನೊಟೀಸ್‌ ಕೂಡ ಜಾರಿಗೊಳಿಸಲಾಗಿತ್ತು. ಆದರೂ ಪ್ರಜ್ವಲ್‌ ರೇವಣ್ಣ ವಿಚಾರಣೆಗೆ ಸಮಯ ಕೇಳಿ ಭಾರತಕ್ಕೆ ಮರಳಿರಲಿಲ್ಲ. ಮತ ಎಣಿಕೆ ಮುಗಿದ ಮೇಲೆಯೇ ಬರಬಹುದು ಎನ್ನುವ ನಿರೀಕ್ಷೆಗಳಿದ್ದವು. ಜೂನ್‌ 4ರ ಲೋಕಸಭೆ ಚುನಾವಣೆ ಮತ ಎಣಿಕೆ ಫಲಿತಾಂಶ ನೋಡಿಕೊಂಡೇ ಭಾರತಕ್ಕೆ ಹಿಂದಿರುಗಬಹುದು ಎಂದು ಹೇಳಲಾಗಿತ್ತು. ಈ ನಡುವೆ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಪ್ರಜ್ವಲ್‌ ಅವರ ಡಿಪ್ಲೊಮ್ಯಾಟಿಕ್‌ ಪಾಸ್‌ಪೋರ್ಟ್‌ ರದ್ದುಪಡಿಸಲು ಕೂಡ ಆಗ್ರಹಿಸಿದ್ದರು. ಈ ಕುರಿತು ವಿಚಾರಣೆಯೂ ಶುರುವಾದ ಬೆನ್ನಲ್ಲೇ ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಮಾಡಿದ್ದು, ಮೇ 31ಕ್ಕೆ ಆಗಮಿಸಿ ಎಸ್‌ ಐಟಿ ವಿಚಾರಣೆ ಎದುರಿಸುವುದಾಗಿ ಹೇಳಿಕೆ ನೀಡಿದ್ದರು.

ಪ್ರಜ್ವಲ್ ಬೆಂಗಳೂರಿಗೆ ಆಗಮಿಸುವುದು ಖಚಿತವಾದ ಹಿನ್ನೆಲೆ ಎಸ್‌ ಐಟಿಯ ಹತ್ತಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿಗಳಿಗೆ ವಶಕ್ಕೆ ಪಡೆಯಲು ಬೇಕಾದ ಸಿದ್ದತೆ ಮಾಡಿಕೊಳ್ಳುವಂತೆ ಹಿರಿಯ ಅಧಿಕಾರಿಗಳೂ ಸೂಚಿಸಿದ್ದಾರೆ. ಆನಂತರ ಪ್ರಜ್ವಲ್‌ ಅವರನ್ನು ಎಸ್‌ ಐಟಿ ತಂಡ ಶುಕ್ರವಾರ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ

Exit mobile version