9:20 PM Saturday 18 - October 2025

‘ಪೇಟೆ ರೌಡಿ’ ಭಾಷೆ ಬಳಸುವವರಿಗೆ ನಾನು ಪ್ರತಿಕ್ರಿಯೆ ನೀಡಲ್ಲ | ಪ್ರತಾಪ್ ಸಿಂಹಗೆ ಸುಮಲತಾ ತಿರುಗೇಟು

17/11/2020

ಬೆಂಗಳೂರು: ಬಿಜೆಪಿ ಸಂಸದ  ಪ್ರತಾಪ್ ಸಿಂಹ ಸಂಸದೆ ಸುಮಲತಾ ಅಂಬರೀಶ್ ಅವರ ವಿರುದ್ಧ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು,  ಪೇಟೆ ರೌಡಿಗಳಂತೆ ಮಾತನಾಡುವವರಿಗೆ ನನ್ನ ರಿಯಾಕ್ಷನ್ ನ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸಂಸದರಾಗಿ ಮತ್ತೊಬ್ಬ ಸಂಸದರ ಬಗ್ಗೆ ಹೇಳಿಕೆ ನೀಡುವುದು ಸರಿಯಲ್ಲ. ಸಂಸದರ ಭಾಷೆಯನ್ನು ಅವರು ಬಳಸಿದ್ದರೆ ಪ್ರತಿಕ್ರಿಯೆ ನೀಡುತ್ತಿದ್ದೆ. ಒಬ್ಬ ಪೇಟೆ ರೌಡಿ ತರ ಮಾತಾಡುವುದಾದರೆ ನನ್ನ ರಿಯಾಕ್ಷನ್ ಗೆ ಅವರಿಗೆ ಅರ್ಹತೆ ಇಲ್ಲ ಎಂದು ಅವರು  ಪ್ರತಾಪ್ ಗೆ ತಿರುಗೇಟು ನೀಡಿದರು.

ಕೊಡಗಿನಲ್ಲಿ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಕೊಡಗಿನ ಜನರು ಸಮಸ್ಯೆಗಳ ಬಗ್ಗೆ ನಮಗೂ ಬಂದು ಹೇಳುತ್ತಾರೆ. ನಾನು ಬರೀ ಮಂಡ್ಯ ಕ್ಷೇತ್ರದ ಸಂಸದೆ ಅಲ್ಲ. ನಾನು ಮೈಸೂರಿನ ಒಂದು ಭಾಗದ ಸಂಸದೆ ಕೂಡ ಆಗಿದ್ದೇನೆ. ಮೈಸೂರು ಜಿಲ್ಲೆಯ ಕೆಆರ್ ನಗರ ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ಸೇರುತ್ತದೆ. ರಾಜಕಾರಣಿ ಹೋದಾಗ ಜನ ಬಂದು ಹೇಳುವುದು ಸಾಮಾನ್ಯ. ಈ ರೀತಿಯ ಮಾತುಗಳು ತುಂಬಾ ಬೇಜವಾಬ್ದಾರಿ ಎಂದು ಅವರು ಹೇಳಿದರು.

ಇತ್ತೀಚಿನ ಸುದ್ದಿ

Exit mobile version