6:02 AM Tuesday 10 - November 2026

2026–27ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆ–1ರ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ: ಅಕ್ಟೋಬರ್ 22ರವರೆಗೆ ಆಕ್ಷೇಪಣೆಗೆ ಅವಕಾಶ

sslc exam
08/10/2026

ಬೆಂಗಳೂರು: 2026–27ನೇ ಸಾಲಿನ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆ–1 ಹಾಗೂ ಪರೀಕ್ಷೆ–2ರ ತಾತ್ಕಾಲಿಕ ವೇಳಾಪಟ್ಟಿಯನ್ನು ದಿನಾಂಕ 08—10–2026 ರಂದು ಅಧಿಕೃತವಾಗಿ ಪ್ರಕಟಿಸಲಾಗಿದೆ.

ಮಂಡಲಿಯು ಪ್ರಕಟಿಸಿರುವ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ. ಪರೀಕ್ಷೆ–1 ಹಾಗೂ ಪರೀಕ್ಷೆ–2ರ ತಾತ್ಕಾಲಿಕ ವೇಳಾಪಟ್ಟಿಗೆ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಆಕ್ಷೇಪಣೆಗಳನ್ನು ಸಲ್ಲಿಸಲು ದಿನಾಂಕ 08–10–2026 ರಿಂದ 22—10–2026 ರವರೆಗೆ ಒಟ್ಟು 15 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ.

ಎಸ್.ಎಸ್.ಎಲ್.ಸಿ. ಆಕ್ಷೇಪಣೆಗಳ ಸಲ್ಲಿಕೆ ಇ–ಮೇಲ್ ವಿಳಾಸ: dpikseab@gmail.com

ಪಿಯುಸಿ ಆಕ್ಷೇಪಣೆಗಳ ಸಲ್ಲಿಕೆ ಇ–ಮೇಲ್ ವಿಳಾಸ: directorpuekseab@gmail.com

ನಿಗದಿತ ಸಮಯದೊಳಗಾಗಿ ಮೇಲ್ಕಂಡ ಇ-ಮೇಲ್ ವಿಳಾಸಗಳಿಗೆ ಆಕ್ಷೇಪಣೆಗಳನ್ನು ಕಳುಹಿಸಬೇಕು. ಕೊನೆಯ ದಿನಾಂಕದ ನಂತರ ಬರುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಮಂಡಲಿ ತಿಳಿಸಿದೆ. ಈ ಸುತ್ತೋಲೆಯನ್ನು ರಾಜ್ಯದ ಎಲ್ಲಾ ಜಿಲ್ಲೆಗಳ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ಮುಖ್ಯ ಶಿಕ್ಷಕರಿಗೆ ಅಗತ್ಯ ಕ್ರಮಕ್ಕಾಗಿ ಕಳುಹಿಸಲಾಗಿದೆ.

ಮಾರ್ಚ್ / ಏಪ್ರಿಲ್ – 2027ರ ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ವಿವರವಾದ ವೇಳಾಪಟ್ಟಿ

  • ಮಾರ್ಚ್ 22, 2027 (ಸೋಮವಾರ) – ಪ್ರಥಮ ಭಾಷೆಗಳು:

o                ವಿಷಯಗಳು ಮತ್ತು ಸಂಕೇತಗಳು: ಕನ್ನಡ (01), ತೆಲುಗು (04), ಹಿಂದಿ (06), ಮರಾಠಿ (08), ತಮಿಳು (10), ಉರ್ದು (12), ಇಂಗ್ಲಿಷ್ (14), ಇಂಗ್ಲಿಷ್-NCERT (15), ಸಂಸ್ಕೃತ (16).

o                ಸಮಯ: ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15ರವರೆಗೆ.

o                ಅವಧಿ: 3 ಗಂಟೆ ಬರೆಯಲು ಹಾಗೂ 15 ನಿಮಿಷ ಪ್ರಶ್ನೆಪತ್ರಿಕೆ ಓದಲು.

o                ಗರಿಷ್ಠ ಅಂಕಗಳು: 100.

  • ಮಾರ್ಚ್ 23, 2027 (ಮಂಗಳವಾರ): ಪರೀಕ್ಷೆ ಇರುವುದಿಲ್ಲ.
  • ಮಾರ್ಚ್ 24, 2027 (ಬುಧವಾರ): ಪರೀಕ್ಷೆ ಇರುವುದಿಲ್ಲ.
  • ಮಾರ್ಚ್ 25, 2027 (ಗುರುವಾರ) – ಕೋರ್ ವಿಷಯಗಳು ಮತ್ತು ಸಂಗೀತ:

o                ವಿಜ್ಞಾನ (ವಿಷಯ ಸಂಕೇತ 83): ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15ರವರೆಗೆ (3 ಗಂಟೆ ಬರೆಯಲು + 15 ನಿಮಿಷ ಓದಲು), ಗರಿಷ್ಠ ಅಂಕಗಳು: 80.

o                ರಾಜ್ಯಶಾಸ್ತ್ರ (ವಿಷಯ ಸಂಕೇತ 97): ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15ರವರೆಗೆ (3 ಗಂಟೆ ಬರೆಯಲು + 15 ನಿಮಿಷ ಓದಲು), ಗರಿಷ್ಠ ಅಂಕಗಳು: 80.

o                ಹಿಂದೂಸ್ಥಾನಿ ಸಂಗೀತ (28) / ಕರ್ನಾಟಕ ಸಂಗೀತ (29): ಮಧ್ಯಾಹ್ನ 2.00 ರಿಂದ ಸಾಯಂಕಾಲ 5.15ರವರೆಗೆ (ತಾತ್ವಿಕ ಪರೀಕ್ಷೆ: ಮಧ್ಯಾಹ್ನ 2.00 ರಿಂದ 3.45ರವರೆಗೆ; ಪ್ರಾಯೋಗಿಕ ಪರೀಕ್ಷೆ: ಮಧ್ಯಾಹ್ನ 3.45 ರಿಂದ ಸಾಯಂಕಾಲ 5.15ರವರೆಗೆ), ಗರಿಷ್ಠ ಅಂಕಗಳು: 80.

  • ಮಾರ್ಚ್ 26, 2027 (ಶುಕ್ರವಾರ): ಗುಡ್ ಫ್ರೈಡೆ ಪ್ರಯುಕ್ತ ಪರೀಕ್ಷೆ ಇರುವುದಿಲ್ಲ.
  • ಮಾರ್ಚ್ 27, 2027 (ಶನಿವಾರ) – ದ್ವಿತೀಯ ಭಾಷೆ:

o                ವಿಷಯಗಳು ಮತ್ತು ಸಂಕೇತಗಳು: ಇಂಗ್ಲಿಷ್ (31), ಕನ್ನಡ (33).

o                ಸಮಯ: ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00ರವರೆಗೆ.

o                ಅವಧಿ: 2 ಗಂಟೆ 45 ನಿಮಿಷ ಬರೆಯಲು ಹಾಗೂ 15 ನಿಮಿಷ ಪ್ರಶ್ನೆಪತ್ರಿಕೆ ಓದಲು.

o                ಗರಿಷ್ಠ ಅಂಕಗಳು: 80.

  • ಮಾರ್ಚ್ 28, 2027 (ಭಾನುವಾರ): ರಜಾ ದಿನ.
  • ಮಾರ್ಚ್ 29, 2027 (ಸೋಮವಾರ): ಪರೀಕ್ಷೆ ಇರುವುದಿಲ್ಲ.
  • ಮಾರ್ಚ್ 30, 2027 (ಮಂಗಳವಾರ) – ಕೋರ್ ವಿಷಯಗಳು:

o                ಗಣಿತ (ವಿಷಯ ಸಂಕೇತ 81) ಮತ್ತು ಸಮಾಜಶಾಸ್ತ್ರ (ವಿಷಯ ಸಂಕೇತ 95): ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15ರವರೆಗೆ.

o                ಅವಧಿ: 3 ಗಂಟೆ ಬರೆಯಲು ಹಾಗೂ 15 ನಿಮಿಷ ಪ್ರಶ್ನೆಪತ್ರಿಕೆ ಓದಲು.

o                ಗರಿಷ್ಠ ಅಂಕಗಳು: 80.

  • ಮಾರ್ಚ್ 31, 2027 (ಬುಧವಾರ): ಪರೀಕ್ಷೆ ಇರುವುದಿಲ್ಲ.
  • ಏಪ್ರಿಲ್ 01, 2027 (ಗುರುವಾರ): ಪರೀಕ್ಷೆ ಇರುವುದಿಲ್ಲ.
  • ಏಪ್ರಿಲ್ 02, 2027 (ಶುಕ್ರವಾರ) – ತೃತೀಯ ಭಾಷೆಗಳು ಹಾಗೂ ಎನ್.ಎಸ್.ಕ್ಯೂ.ಎಫ್. ವಿಷಯಗಳು:

o                ತೃತೀಯ ಭಾಷೆಗಳು: ಹಿಂದಿ-NCERT (60), ಹಿಂದಿ (61), ಕನ್ನಡ – ಪುನರಾವರ್ತಿತ ಅಭ್ಯರ್ಥಿಗಳಿಗೆ ಮಾತ್ರ (62), ಇಂಗ್ಲಿಷ್ (63), ಅರೇಬಿಕ್ (64), ಉರ್ದು (66), ಸಂಸ್ಕೃತ (67), ಕೊಂಕಣಿ (68), ತುಳು (69), ಮರಾಠಿ (70).

o                ಸಮಯ (ತೃತೀಯ ಭಾಷೆ): ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.00ರವರೆಗೆ (2 ಗಂಟೆ 45 ನಿಮಿಷ ಬರೆಯಲು + 15 ನಿಮಿಷ ಓದಲು), ಗರಿಷ್ಠ ಅಂಕಗಳು: 80.

o                ಎನ್.ಎಸ್.ಕ್ಯೂ.ಎಫ್. (NSQF) ವಿಷಯಗಳು: ಮಾಹಿತಿ ತಂತ್ರಜ್ಞಾನ (86), ರಿಟೇಲ್ (87), ಆಟೋಮೊಬೈಲ್ (88), ಬ್ಯೂಟಿ ಅಂಡ್ ವೆಲ್ನೆಸ್ (90), ಅಪರೆಲ್ ಮೇಡ್ ಅಪ್ಸ್ & ಹೋಮ್ ಫರ್ನಿಷಿಂಗ್ (21), ಎಲೆಕ್ಟ್ರಾನಿಕ್ಸ್ & ಹಾರ್ಡ್ವೇರ್ (22).

o                ಸಮಯ (NSQF): ಬೆಳಿಗ್ಗೆ 10.00 ರಿಂದ 12.15ರವರೆಗೆ (2 ಗಂಟೆ ಬರೆಯಲು + 15 ನಿಮಿಷ ಓದಲು), ಗರಿಷ್ಠ ಅಂಕಗಳು: 60.

  • ಏಪ್ರಿಲ್ 03, 2027 (ಶನಿವಾರ) – ಜೆ.ಟಿ.ಎಸ್. ವಿಷಯಗಳು ಹಾಗೂ ಅರ್ಥಶಾಸ್ತ್ರ:

o                ಜೆ.ಟಿ.ಎಸ್. ವಿಷಯಗಳು: ಎಲಿಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್-IV (51), ಎಲಿಮೆಂಟ್ಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರಿಂಗ್-IV (52), ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್-IV (53), ಪ್ರೋಗ್ರಾಮಿಂಗ್ ಇನ್ ANSI ‘C’ (54).

o                ಅರ್ಥಶಾಸ್ತ್ರ (ವಿಷಯ ಸಂಕೇತ 96): ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15ರವರೆಗೆ, ಗರಿಷ್ಠ ಅಂಕಗಳು: 80.

  • ಏಪ್ರಿಲ್ 04, 2027 (ಭಾನುವಾರ): ರಜಾ ದಿನ.
  • ಏಪ್ರಿಲ್ 05, 2027 (ಸೋಮವಾರ) – ಕೋರ್ ವಿಷಯ:

o                ಸಮಾಜ ವಿಜ್ಞಾನ (ವಿಷಯ ಸಂಕೇತ 85): ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 1.15ರವರೆಗೆ, ಗರಿಷ್ಠ ಅಂಕಗಳು: 80.

ಪ್ರಮುಖ ಸೂಚನೆಗಳು ಮತ್ತು ವಿಶೇಷ ನಿಯಮಗಳು:

  1. ಪ್ರಾಯೋಗಿಕ ಪರೀಕ್ಷೆ: ಜೆ.ಟಿ.ಎಸ್. ವಿದ್ಯಾರ್ಥಿಗಳಿಗೆ (ವಿಷಯ ಸಂಕೇತ 56, 57, 58 ಮತ್ತು 59) ಪ್ರಾಯೋಗಿಕ ಹಾಗೂ ಮೌಖಿಕ ಪರೀಕ್ಷೆಗಳನ್ನು ದಿನಾಂಕ 06.04.2027 (ಮಂಗಳವಾರ) ರಂದು ಆಯಾ ಶಾಲೆಗಳಲ್ಲಿ ನಡೆಸಲಾಗುವುದು.
  2. ಆದರ್ಶ ವಿದ್ಯಾಲಯ ವಿದ್ಯಾರ್ಥಿಗಳು: ವಿಷಯ ಸಂಕೇತ 15 (ಇಂಗ್ಲಿಷ್ NCERT) ಮತ್ತು 60 (ಹಿಂದಿ NCERT) ವಿಷಯಗಳು ಆದರ್ಶ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತವೆ.
  3. ಸಂಗೀತ ಪರೀಕ್ಷೆಯ ಸಮಯ: ಹಿಂದೂಸ್ಥಾನಿ ಸಂಗೀತ ಮತ್ತು ಕರ್ನಾಟಕ ಸಂಗೀತ ವಿಷಯದ ಪರೀಕ್ಷೆಯನ್ನು ಮಧ್ಯಾಹ್ನ 2.00 ಗಂಟೆಯಿಂದ ಸಾಯಂಕಾಲ 5.15ರವರೆಗೆ ನಿಗದಿಪಡಿಸಲಾಗಿದೆ (ತಾತ್ವಿಕ ಪರೀಕ್ಷೆ ಮಧ್ಯಾಹ್ನ 2.00 ರಿಂದ 3.45ರವರೆಗೆ ಮತ್ತು ಪ್ರಾಯೋಗಿಕ ಪರೀಕ್ಷೆ ಮಧ್ಯಾಹ್ನ 3.45 ರಿಂದ ಸಾಯಂಕಾಲ 5.15ರವರೆಗೆ).
  4. ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸಮಯ: 3 ಗಂಟೆಯ ಪ್ರಶ್ನೆಪತ್ರಿಕೆಗೆ 60 ನಿಮಿಷಗಳು, 2 ಗಂಟೆ 30 ನಿಮಿಷದ ಪ್ರಶ್ನೆಪತ್ರಿಕೆಗೆ 50 ನಿಮಿಷಗಳು, 2 ಗಂಟೆಯ ಪ್ರಶ್ನೆಪತ್ರಿಕೆಗೆ 40 ನಿಮಿಷಗಳು ಹಾಗೂ 1 ಗಂಟೆ 30 ನಿಮಿಷದ ಪ್ರಶ್ನೆಪತ್ರಿಕೆಗೆ 30 ನಿಮಿಷಗಳನ್ನು ಹೆಚ್ಚುವರಿಯಾಗಿ ನೀಡಲಾಗುವುದು.
  5. ವಿಭಿನ್ನ ಸಾಮರ್ಥ್ಯವುಳ್ಳ ಅಭ್ಯರ್ಥಿಗಳ ಪರ್ಯಾಯ ವಿಷಯಗಳು ಮತ್ತು ಸಂಕೇತಗಳು: ಸಮಾಜಶಾಸ್ತ್ರ (95), ಅರ್ಥಶಾಸ್ತ್ರ (96), ರಾಜ್ಯಶಾಸ್ತ್ರ (97), ಹಿಂದೂಸ್ಥಾನಿ ಸಂಗೀತ (28), ಕರ್ನಾಟಕ ಸಂಗೀತ (29).

ವೇಳಾಪಟ್ಟಿ ಡೌನ್ ಲೋಡ್ ಮಾಡಲು ಲಿಂಕ್ ಗೆ ಕ್ಲಿಕ್ ಮಾಡಿ:
https://kseab.karnataka.gov.in/uploads/2027_SSLC_Exam_1_Timetable_1791461654.pdf

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version