6:49 PM Wednesday 22 - October 2025

ಶಾಲೆಗೆ ನುಗ್ಗಿ ಅಟ್ಟಾಡಿಸಿ ಪ್ರಾಂಶುಪಾಲರಿಗೆ ಥಳಿಸಿದ ಹಿಂದೂ ಕಾರ್ಯಕರ್ತರ ಗುಂಪು: ಪುಣೆಯಲ್ಲಿ ನಡೀತು ಅನೈತಿಕ ಪೊಲೀಸ್ ಗಿರಿ..!

06/07/2023

ಶಾಲಾ ಅಸೆಂಬ್ಲಿಯಲ್ಲಿ ಕ್ರೈಸ್ತ ಪ್ರಾರ್ಥನೆಯನ್ನು ಮಾಡಲಾಗಿದೆ ಎಂದು ಆರೋಪಿಸಿ ಶಾಲೆಗೆ ನುಗ್ಗಿರುವ ಹಿಂದೂ ಕಾರ್ಯಕರ್ತರ ಗುಂಪೊಂದು ಶಾಲಾ ಪ್ರಾಂಶುಪಾಲರನ್ನು ತೀವ್ರವಾಗಿ ಥಳಿಸಿರುವ ಘಟನೆ ಪುಣೆಯಲ್ಲಿಂದು ನಡೆದಿದೆ.

ಪುಣೆಯ ತಾಲೆಗಾಂವ್‌ ದಭಾದೆ ಪಟ್ಟಣದಲ್ಲಿರುವ ಡಿ ವೈ ಪಾಟೀಲ್‌ ಹೈಸ್ಕೂಲಿನಲ್ಲಿ ಅಸೆಂಬ್ಲಿ ವೇಳೆ ವಿದ್ಯಾರ್ಥಿಗಳಿಂದ ಕ್ರೈಸ್ತರ ನಂಬಿಕೆಯ ಪ್ರಾರ್ಥನೆ ಹೇಳಿಸಿದ್ದಾರೆಂದು ಬಜರಂಗದಳ ಕಾರ್ಯಕರ್ತರು ಆರೋಪಿಸಿದ್ದಾರೆ.

ಬಜರಂಗಿಗಳು ಶಾಲಾ ಪ್ರಾಂಶುಪಾಲರಿಗೆ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ.

ಈ ವೈರಲ್‌ ವೀಡಿಯೋದಲ್ಲಿ ಪ್ರಾಂಶುಪಾಲ ಅಲೆಕ್ಸಾಂಡರ್‌ ಕೋಟ್ಸ್‌ ರೀಡ್‌ ಅವರಿಗೆ ಗುಂಪೊಂದು ಅಟ್ಟಾಡಿಸಿ ಹೊಡೆಯುತ್ತಿರುವುದು ಕಂಡು ಬಂದಿದೆ. ಅಲ್ಲದೇ ಗುಂಪು ಹರ್‌ ಹರ್‌ ಮಹಾದೇವ್‌ ಘೋಷಣೆ ಕೂಗುವುದು ಕೂಡಾ ವಿಡಿಯೋದಲ್ಲಿ ಕಾಣಬಹುದು.

ಸುಮಾರು 100 ಜನರಿದ್ದ ಗುಂಪು ಶಾಲಾ ಕಟ್ಟಡಕ್ಕೆ ನುಗ್ಗಿ ಅಟ್ಟಹಾಸ ಮೆರೆದಿತ್ತು. ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version