ಪುರುಷರು ಹೆಚ್ಚಾಗಿ ಗೂಗಲ್ ನಲ್ಲಿ ಏನನ್ನು ಹುಡುಕುತ್ತಾರೆ ಗೊತ್ತಾ? | ಹೊಸ ಸಮೀಕ್ಷೆ

google search
04/07/2021

ಬೃಹತ್ ಸರ್ಚ್ ಇಂಜಿನ್ ಗೂಗಲ್ ನಲ್ಲಿ ಪುರುಷರು ಹೆಚ್ಚಾಗಿ ಏನನ್ನು ಸರ್ಚ್ ಮಾಡುತ್ತಾರೆ ಎಂಬ ಬಗ್ಗೆ Frommars.com ವೆಬ್ ಸೈಟ್ ಪತ್ತೆ ಮಾಡಿದೆ. ಪುರುಷರ ಮನಸ್ಸನ್ನು ಅರಿಯುವ ನಿಟ್ಟಿನಲ್ಲಿ ಈ ವೆಬ್ ಸೈಟ್ ಸಮೀಕ್ಷೆಯನ್ನು ಮಾಡಿದೆ.

ಫಿಟ್ ನೆಸ್: ಬಹುತೇಕ ಪುರುಷರು ಫಿಟ್ ನೆಸ್ ಬಗ್ಗೆ ಹೆಚ್ಚಾಗಿ ಹುಡುಕಾಟ ನಡೆಸುತ್ತಿದ್ದಾರಂತೆ. ವ್ಯಾಯಾಮದ ಬಳಿಕ ಪ್ರೋಟೀನ್ ತೆಗೆದುಕೊಳ್ಳಬೇಕೋ, ಬೇಡವೋ? ಎಂಬ ಬಗ್ಗೆ ತಿಳಿಯಲು ಪ್ರಯತ್ನಿಸುತ್ತಿದ್ದಾರಂತೆ. ಈ ಪೈಕಿ ಯಾವ ಪ್ರೋಟೀನ್ ಬೆಸ್ಟ್ ಎಂಬುದನ್ನೂ ತಿಳಿಯಲು ಪ್ರಯತ್ನಿಸುತ್ತಿದ್ದಾರಂತೆ.

ಕೂದಲು ಉದುರುತ್ತಾ?:  ಜುಟ್ಟು ಕಟ್ಟಿದ್ರೆ ಅಥವಾ ಟೋಪಿ ಹಾಕಿದ್ರೆ ಕೂದಲು ಉದುರುತ್ತಾ ಎಂಬ ಪ್ರಶ್ನೆಗೂ ಉತ್ತರ ಹುಡುಕುವ ಪ್ರಯತ್ನ ನಡೆಸುತ್ತಾರೆ. ಪ್ರತಿ ವರ್ಷ ಸರಾಸರಿ 52,100 ಜನರು ಗೂಗಲ್‌ನಲ್ಲಿ ಈ ವಿಷ್ಯದ ಬಗ್ಗೆ ಹುಡುಕಾಟ ನಡೆಸುತ್ತಾರಂತೆ.

ಸ್ತನ ಕ್ಯಾನ್ಸರ್:  ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುವುದು ಮಹಿಳೆಯರಲ್ಲಿ. ಆದರೆ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿಯಿರುವ ಪುರುಷರು, ತಮಗೆ ಸ್ತನ ಕ್ಯಾನ್ಸರ್ ಬರಬಹುದೆ ಎಂಬುದನ್ನು ತಿಳಿಯಲು ಬಯಸುತ್ತಾರೆ. ಈ ಕುರಿತು 61,200 ಜನರು ಗೂಗಲ್‌ನಲ್ಲಿ ಹುಡುಕಿದ್ದಾರೆ. ಪುರುಷರಲ್ಲಿ ಇತರ ಕ್ಯಾನ್ಸರ್ ಗಳಿಗಿಂತ ಸ್ತನ ಕ್ಯಾನ್ಸರ್ ತುಂಬಾ ಭಿನ್ನವಾಗಿರುತ್ತದೆ. 60 ವರ್ಷದ ನಂತರ ಪುರುಷರು ಈ ಸಮಸ್ಯೆಯಿಂದ ಬಳಲುತ್ತಾರೆ.

ಶೇವಿಂಗ್:  ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿಯಿರುವ ಪುರುಷರು ಶೇವಿಂಗ್ ಬಗ್ಗೆ ತಿಳಿದುಕೊಳ್ಳಲು ಇಚ್ಛಿಸುತ್ತಾರೆ. ಶೇವಿಂಗ್ ನಂತ್ರ ಹೆಚ್ಚಿನ ಕೂದಲು ಬೆಳೆಯುವ ಸಾಧ್ಯತೆಯಿದೆಯಾ ಎಂಬುದನ್ನು ಸರ್ಚ್ ಮಾಡ್ತಾರೆ. ಪ್ರತಿವರ್ಷ 68,400 ಜನರು ಈ ಬಗ್ಗೆ ಹುಡುಕಾಟ ನಡೆಸಿದ್ದಾರೆ.

ನಪುಂಸಕತೆ: ಪುರುಷರು ತಮ್ಮ ಲೈಂಗಿಕತೆಯ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ಪ್ರತಿವರ್ಷ 68,600 ಜನರು ನಪುಂಸಕತೆಯ ಲಕ್ಷಣ ಹೊಂದಿದ್ದಾರಾ ಎಂಬುದನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸುತ್ತಾರೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version