8:27 AM Wednesday 27 - August 2025

ವಿಪಕ್ಷ ನಾಯಕನಾಗಲು ಆರ್.ಅಶೋಕ್ ನಾಲಾಯಕ್: ಮುತಾಲಿಕ್ ಕಿಡಿ

muthalik
23/02/2024

ಉಡುಪಿ: ವಿಪಕ್ಷ ನಾಯಕನಾಗಲು ಆರ್.ಅಶೋಕ್ ನಾಲಾಯಕ್ ಎಂದು ಶ್ರೀರಾಮಸೇನಾ ಮುಖ್ಯಸ್ಥ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಬ್ ದಾಳಿ ಮಾಡಿದ್ದ ಬಜರಂಗದಳ ಕಾರ್ಯಕರ್ತರ ಮೇಲೆ ಗುಂಡಾ ಕಾಯ್ದೆ ಹಾಕಿದ್ದೆ ಎಂದು ಅಧಿವೇಶನದಲ್ಲಿ ಅಶೋಕ್ ಹೇಳಿದ್ದರು. ಆದರೆ, ಮಂಗಳೂರು ಪಬ್ ದಾಳಿ ಮಾಡಿದ್ದು ಬಜರಂಗದಳ ಅಲ್ಲ, ಶ್ರೀರಾಮ ಸೇನೆ ಎಂದು ಸಾಮಾಜಿ ಜಾಲತಾಣಗಳಲ್ಲಿ ಶ್ರೀರಾಮ ಸೇನೆ ಸಂದೇಶ ಪ್ರಕಟಿಸಿದೆ.

ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆಯಡಿ ಪ್ರಥಮ ಬಾರಿ ಪ್ರಕರಣ ದಾಖಲಿಸಿದವರೇ ಆರ್. ಅಶೋಕ್. ಕಾಂಗ್ರೆಸ್ ನವರು ಯಾವತ್ತೂ ಹಿಂದೂ ಕಾರ್ಯಕರ್ತರ ಮೇಲೆ ಗುಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಲ್ಲ. ಈ ವಿಚಾರವನ್ನು ನಾನೇ ಆರ್ ಅಶೋಕ್ ಗೆ ಹೇಳಿದ್ದೆ, ಆರ್.ಅಶೋಕ್ ನ ನಂತರ ಕಾಂಗ್ರೆಸ್ ನವರು ಗೂಂಡಾ ಕಾಯ್ದೆಯಡಿ ದೂರು ದಾಖಲಿಸಿದ್ದರು ಎಂದು ಮುತಾಲಿಕ್ ಕಿಡಿಕಾರಿದ್ದಾರೆ

ಪಿಎಫ್ಐ ಗಲಾಟೆ ಮಾಡಿದಾಗ ಗೃಹ ಸಚಿವರಾಗಿ ಅಶೋಕ್ ಒಂದೇ ಒಂದು ಪತ್ರ ಕೇಂದ್ರಕ್ಕೆ ಬರೆದಿರಲಿಲ್ಲ ಎಂದು ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದರಲ್ಲದೇ, ಚಾಮರಾಜಪೇಟೆಯಲ್ಲಿ ಗಣಪತಿ ಇಡದೇ ಇರಲು ಕಾರಣವೇ ಆರ್ ಅಶೋಕ್, ಜಮೀರ್ ಮತ್ತು ಅಶೋಕ್ ಜೋಡಿಗಳು ಎಂದು ಕಿಡಿಕಾರಿದರಲ್ಲದೇ ವಿಪಕ್ಷ ನಾಯಕನಾಗಲು ಆರ್ ಅಶೋಕ್ ಅಯೋಗ್ಯ, ಅವರನ್ನು ವಿಪಕ್ಷ ನಾಯಕನ ಸ್ಥಾನದಿಂದ ತೆಗೆದು ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version