7:59 AM Wednesday 10 - December 2025

ರಾಹುಲ್ ಗಾಂಧಿ ದಲಿತ ಯುವತಿಯನ್ನು ಮದುವೆಯಾಗಿ ಗಾಂಧೀಜಿ ಕನಸು ಈಡೇರಿಸಿ | ಸಚಿವ ರಾಮ್​ ದಾಸ್ ಅಠಾವಳೆ

16/02/2021

ನವದೆಹಲಿ: ರಾಹುಲ್ ಗಾಂಧಿ ದಲಿತ ಯುವತಿಯನ್ನು ಮದುವೆಯಾಗುವ ಮೂಲಕ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲಿ ಎಂದು ಕೇಂದ್ರ ಸಚಿವ ರಾಮ್ದಾಸ್ ಅಠಾವಳೆ ಹೇಳಿಕೆ ನೀಡಿದ್ದಾರೆ.

 

“ಹಮ್ ದೋ, ಹಮಾರೆ ದೋ” ಅಂದರೆ, ನಾವಿಬ್ಬರು, ನಮಗಿಬ್ಬರು ಎಂದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರು ಅಂಬಾನಿ ಸಹೋದರ ಸೇವೆ ಮಾಡುತ್ತಿದ್ದಾರೆ ಎಂಬಂತೆ ಸ್ಲೋಗನ್ ಬಳಸಿರುವುದನ್ನು ವಿರೋಧಿಸಿದ ಅಠಾವಳೆ ಈ ಹೇಳಿಕೆ ನೀಡಿದ್ದಾರೆ.

 

ನಾವಿಬ್ಬರು, ನಮಗಿಬ್ಬರು ಎನ್ನುವ ಸ್ಲೋಗನ್ ಹಿಂದೆ ಕುಟುಂಬ ಕಲ್ಯಾಣ ಯೋಜನೆಯಲ್ಲಿ ಬಳಸಲಾಗುತ್ತಿತ್ತು. ರಾಹುಲ್ ಗಾಂಧಿ ಇದನ್ನು ಪ್ರಮೋಟ್ ಮಾಡಬೇಕು ಅಂದುಕೊಂಡಿದ್ದರೆ, ದಲಿತ ಯುವತಿಯನ್ನು ಮದುವೆಯಾಗಿ ಜಾತಿ ವ್ಯವಸ್ಥೆಯನ್ನು ನಿರ್ಮೂಲನೆ ಮಾಡುವ ಗಾಂಧೀಜಿ ಕನಸನ್ನು ಈಡೇರಿಸಿ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

 

ಇತ್ತೀಚಿನ ಸುದ್ದಿ

Exit mobile version