ಬಿಸಿಲ ಧಗೆಗೆ ಬಳಲಿ ಬೆಂಡಾಗಿದ್ದ ಕಾಫಿನಾಡಿಗೆ ತಂಪೆರೆದ ಮಳೆರಾಯ

01/09/2023
ಚಿಕ್ಕಮಗಳೂರು: ಬಿಸಿಲ ಧಗೆಗೆ ಬಳಲಿ ಬೆಂಡಾಗಿದ್ದ ಕಾಫಿನಾಡಿಗೆ ಮಳೆ ತಂಪೆರೆದಿದ್ದು, ಚಿಕ್ಕಮಗಳೂರು ನಗರದಲ್ಲಿ ಸುಮಾರು ಒಂದು ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ.
ಗುಡುಗು–ಮಿಂಚು ಸಹಿತ ಧಾರಾಕಾರವಾಗಿ ಮಳೆ ಸುರಿದಿದ್ದು, ಕಳೆದೊಂದು ತಿಂಗಳಿನಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಮಳೆಯ ಪರಿಣಾಮ ಚಿಕ್ಕಮಗಳೂರು ನಗರದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿದೆ. ಚರಂಡಿ ಬಂದ್ ಆಗಿ, ರಸ್ತೆಯಲ್ಲಿ ನೀರು ಹರಿದಿದೆ. ಭಾರೀ ಮಳೆಯಿಂದ ಚಿಕ್ಕಮಗಳೂರು ನಗರದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.