3:10 PM Thursday 29 - January 2026

ನಾನು ಶೇ.30ರಷ್ಟು ಸಾಯುವ ಸಾಧ್ಯತೆ ಇದೆ | ಬಾಹುಬಲಿಯ ರಾಣಾ ದುಗ್ಗುಬಾಟಿ ಹೇಳಿಕೆ | ಅವರ ಆರೋಗ್ಯ ಸ್ಥಿತಿ ಏನು ಗೊತ್ತಾ?

24/11/2020

ಬಾಹುಬಲಿಯ ದೈತ್ಯ ವಿಲನ್ ರಾಣಾ ದುಗ್ಗುಬಾಟಿ ಅವರು ತಮ್ಮ ದೈತ್ಯಾಕಾರದ ದೇಹವನ್ನು ಕಳೆದುಕೊಂಡ ಬಳಿಕ, ಇದೀಗ ಟಿವಿ ಶೋವೊಂದರಲ್ಲಿ ತಾನು ಶೇ.30ರಷ್ಟು ಸಾಯುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ ಅಭಿಮಾನಿಗಳನ್ನು ಗದ್ಗದಿತರನ್ನಾಗಿಸಿದ್ದಾರೆ.

ನಟಿ ಸಮಂತಾ ಅಕ್ಕಿನೇನಿ ನಡೆಸಿಕೊಡುವ ಸ್ಯಾಮ್​ ಜಾಮ್​ ಟಾಕ್​ಶೋ ನಲ್ಲಿ ದಗ್ಗುಬಾಟಿ ಈ ರೀತಿಯಾಗಿ ಹೇಳಿ ಭಾವುಕರಾಗಿದ್ದಾರೆ.

ಜೀವನವು ವೇಗವಾಗಿ ಓಡುತ್ತಿರುವಾಗ ಕೆಲವು ಬಾರಿ ವಿರಾಮದ ಬಟನ್ ಇರುತ್ತದೆ. ನನಗೆ ಕಿಡ್ನಿ ವೈಫಲ್ಯ ಆಗಿದೆ. ಶೇ. 70 ರಷ್ಟು ಪಾರ್ಶ್ವವಾಯು ಮತ್ತು ರಕ್ತಸ್ರಾವ ಸಂಭವವಿದೆ ಮತ್ತು ಸಾಯುವ ಸಾಧ್ಯತೆ 30 ರಷ್ಟಿದೆ ಎಂದು ಅವರು ಭಾವುಕರಾಗಿದ್ದಾರೆ.


ಇತ್ತೀಚಿನ ಸುದ್ದಿ

Exit mobile version