ಸೊಸೆಯ ಮೇಲೆ ಮಾವನಿಂದಲೇ ರೇಪ್: ಪತಿಗೆ ವಿಷಯ ತಿಳಿಸಿದಾಗ ಮಹಿಳೆಯನ್ನೇ ಮನೆಯಿಂದ ಹೊರ ಹಾಕಿದರು!

ಲಕ್ನೋ: ಸೊಸೆಯ ಮೇಲೆ ಮಾವ ಅತ್ಯಾಚಾರ ನಡೆಸಿದ್ದು, ಈ ವಿಚಾರವನ್ನು ಸೊಸೆ ತನ್ನ ಪತಿಗೆ ತಿಳಿಸಿದಾಗ ಆತ ಆಕೆಯನ್ನು ಮನೆಯಿಂದ ಹೊರಗೆ ಹಾಕಿದ ಅಮಾನವೀಯ ಪ್ರಸಂಗ ಉತ್ತರ ಪ್ರದೇಶದಲ್ಲಿ ನಡೆದಿದೆ.
ಅತ್ತೆಯನ್ನು ಪತಿ ಔಷಧಿಗೆ ಹೊರಗಡೆ ಕರೆದೊಯ್ದಾಗ ಮಾವ ನನ್ನ ಮೇಲೆ ಅತ್ಯಾಚಾರ ನಡೆಸಿದ್ದು, ಈ ಬಗ್ಗೆ ಯಾರಿಗೂ ಹೇಳದಂತೆ ನನಗೆ ಥಳಿಸಿದ್ದಾರೆ. ಈ ವಿಚಾರವನ್ನು ಪತಿಯ ಬಳಿ ತಾನು ಹೇಳಿದಾಗ, ನನ್ನ ತಂದೆ ನಿನ್ನ ಜೊತೆ ಲೈಂಗಿಕ ಸಂಪರ್ಕ ಹೊಂದಿದರಿಂದಾಗಿ ನೀನು ನನಗೆ ಪತ್ನಿ ಆಗುವುದಿಲ್ಲ, ಅಮ್ಮ ಆಗುತ್ತಿ, ನೀನು ನನ್ನ ಜೊತೆಗೆ ಇರಬಾರದು ಎಂದು ತಾಕೀತು ಮಾಡಿದ ಪತಿ ತನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾನೆ ಎಂದು ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸಂತ್ರಸ್ತ ಮಹಿಳೆಯು 7 ತಿಂಗಳ ಗರ್ಭಿಣಿಯಾಗಿದ್ದಾಳೆ. ಸದ್ಯ ಪತಿಯ ಮನೆಯಿಂದ ಹೊರ ಹಾಕಿರುವ ಕಾರಣ ತನ್ನ ಪೋಷಕರ ಮನೆಯಲ್ಲಿದ್ದಾಳೆ.
ಇತ್ತ ಸೊಸೆ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಮಾವ, ಹಣಕ್ಕಾಗಿ ಆಕೆ ಆರೋಪ ಮಾಡುತ್ತಿದ್ದಾಳೆ ಎಂದು ಆರೋಪಿಸಿದ್ದಾನೆ. ಸದ್ಯ ಮಹಿಳೆಯ ದೂರಿನಂತೆ ಪೊಲೀಸರು ಲೈಂಗಿಕ ದೌರ್ಜನ್ಯ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.