3:56 AM Thursday 16 - October 2025

ರವಿಚಂದ್ರನ್ ಅವರ ಜೊತೆಗೆ ಕಾಣಿಸಿಕೊಂಡ ಜರ್ಮನಿಯ ವ್ಯಕ್ತಿ ಯಾರು ಗೊತ್ತಾ?

12/11/2020

ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಜರ್ಮನ್ ವ್ಯಕ್ತಿಯೊಬ್ಬರ ಜೊತೆಗೆ ನಿಂತುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಷ್ಟಕ್ಕೂ ಈ ಜರ್ಮನಿಯವರಿಗೂ ರವಿಚಂದ್ರನ್ ಅವರಿಗೂ ಏನು ಸಂಬಂಧ ಈ ಚಿತ್ರ ಯಾಕೆ ವೈರಲ್ ಆಗುತ್ತಿದೆ ಎಂದು  ಎಲ್ಲರೂ ಅಚ್ಚರಿಪಟ್ಟಿದ್ದಾರೆ. ಆದರೆ ಇದೀಗ ಈ ಚಿತ್ರದ ಹಿಂದಿನ ರಹಸ್ಯ ಬಯಲಾಗಿದೆ.

‘ಕನ್ನಡಿಗ’ ಚಿತ್ರಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಬಣ್ಣಹಚ್ಚುತ್ತಿದ್ದಂತೆಯೇ ಈ ಫೋಟೋ ವೈರಲ್ ಆಗಿದೆ. ಸದ್ಯ ಚಿಕ್ಕಮಗಳೂರಿನಲ್ಲಿ ಚಿತ್ರದ ಶೂಟಿಂಗ್ ನಡೆಯುತ್ತಿದೆ.

ಈ ಚಿತ್ರದಲ್ಲಿ ರವಿಚಂದ್ರನ್ ಅವರು ಲಿಪಿಕಾರ ಗುಣಭದ್ರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಅವರ ಹೊಸ ಗೆಟಪ್ ಕೂಡ ಈಗಾಗಲೇ ರಿವೀಲ್ ಆಗಿದೆ.  ಅಂದ ಹಾಗೆ ಸದ್ಯ ರವಿಚಂದ್ರ ಅವರ ಜೊತೆಗೆ ಕಾಣಿಸಿಕೊಂಡಿರುವ ಜರ್ಮನಿಯ ವ್ಯಕ್ತಿ, ಕನ್ನಡಿಗ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಮಾಡಲಿದ್ದಾರಂತೆ,  ಹೀಗಾಗಿಯೇ ರವಿಚಂದ್ರನ್ ಹಾಗೂ ಜರ್ಮನಿಯ ವ್ಯಕ್ತಿ ಜೇಮಿ ಆಲ್ಟರ್ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದು, ಈ ಫೋಟೋ ಇದೀಗ ವೈರಲ್ ಆಗಿದೆ.

ಕನ್ನಡದ ನಿಘಂಟು ಸಂಪಾದಿಸಿದ ರೆವರೆಂಡ್ ಫರ್ಡಿನಾಂಡ್ ಕಿಟ್ಟೆಲ್ ಪಾತ್ರದಲ್ಲಿ ಜರ್ಮಿನಿಯ ಜೇಮಿ ಆಲ್ಟರ್ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿಯೇ ರವಿಚಂದ್ರನ್ ಅವರ ಜೊತೆಗೆ ಸೆಟ್ ನಲ್ಲಿ ಅವರು ಕಾಣಿಸಿಕೊಂಡಿದ್ದು, ಈ ಫೋಟೋ ವೈರಲ್ ಆಗಿದೆ.

ಇತ್ತೀಚಿನ ಸುದ್ದಿ

Exit mobile version