ಶಾಲಾ ಮಕ್ಕಳು ಮಾದಕ ವಸ್ತುಗಳಿಗೆ ಬಲಿಯಾಗುವುದು ಕಂಡರೆ ತಿಳಿಸಿ: ಕುಂದು ಕೊರತೆ ಸಭೆಯಲ್ಲಿ ಬೆಳ್ಳಾರೆ ಉಪ ನಿರೀಕ್ಷಕ ಸುಹಾಸ್

bellare
25/06/2023

ಬೆಳ್ಳಾರೆ: ಎಸ್ ಸಿ, ಎಸ್ ಟಿ ಕುಂದು ಕೊರತೆ ಸಭೆಯು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಜೂನ್ 25 ರಂದು ನಡೆಯಿತು.

ಬೆಳ್ಳಾರೆ ಉಪ ನಿರೀಕ್ಷಕರಾದ ಸುಹಾಸ್ ಅವರು ಸಭೆಯನ್ನುದ್ದೇಶಿಸಿ ಮಾತನಾಡಿ, ಯಾರಿಗಾದರೂ ಏನಾದರೂ ತೊಂದರೆಯಾದರೆ ತಕ್ಷಣ ನನಗೆ ಕರೆ ಮಾಡಿ ಮತ್ತು ಕಾಲೋನಿಯಲ್ಲಿ ಸಭೆ ಮಾಡೋಣ, ಶಾಲಾ ಮಕ್ಕಳು ಮಾದಕ ವಸ್ತುವಿಗೆ ಬಲಿಯಾಗುತ್ತಿರುವಂತಹ ಘಟನೆಗಳು ಕಂಡು ಬಂದಲ್ಲಿ ನನಗೆ ತಿಳಿಸಿ ಎಂದು ಅವರು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಪಿ.ಸುಂದರ ಪಾಟಾಜೆ, ಸಾಮಾಜಿಕ ಹೋರಾಟಗಾರರಾದ ನಂದರಾಜ್ ಸಂಕೇಶ್, ರಮೇಶ್ ಕೊಡಂಕಿರಿ, ಬಾಲಚಂದ್ರ ಅಡ್ಕರ್, ವಿಶ್ವನಾಥ, ಅಲೆಕ್ಕಾಡಿ, ಬಾಬು ಎನ್. ಸೌನೂರು ಉಪಸ್ಥಿತರಿದ್ದರು ಪೋಲಿಸ್ ಕಾನ್ಸ್ಟೇಬಲ್ ಮೋಹನ್ ಅವರು ಕಾರ್ಯಕ್ರಮವನ್ನು ಸ್ವಾಗತಿಸಿ ವಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version