12:46 PM Thursday 21 - August 2025

ಹಿಮಾಚಲ ಮುಖ್ಯಮಂತ್ರಿ ತಿನ್ನಬೇಕಾಗಿದ್ದ ಸಮೋಸಾ ಭದ್ರತಾ ಸಿಬ್ಬಂದಿಗೆ ರವಾನೆ: ಸಿಐಡಿ ತನಿಖೆಗೆ ಆದೇಶ!

08/11/2024

ಮುಖ್ಯಮಂತ್ರಿ ಸುಖ್ವಿಂದರ್ ಸಿಂಗ್ ಸುಖು ಅವರಿಗೆ ಮೀಸಲಾದ ಸಮೋಸಾ ಮತ್ತು ಕೇಕ್ ಗಳನ್ನು ಅವರ ಭದ್ರತಾ ಸಿಬ್ಬಂದಿಗೆ ಬಡಿಸಿದ ಘಟನೆಯ ಬಗ್ಗೆ ಸಿಐಡಿ ತನಿಖೆಗೆ ಹಿಮಾಚಲ ಪ್ರದೇಶ ಸರ್ಕಾರ ಆದೇಶಿಸಿದೆ.
ಅಕ್ಟೋಬರ್ 21 ರಂದು ಸುಖು ಸಿಐಡಿ ಪ್ರಧಾನ ಕಚೇರಿಗೆ ಭೇಟಿ ನೀಡಿದಾಗ ನಡೆದ ಘಟನೆಯನ್ನು ‘ಸರ್ಕಾರಿ ವಿರೋಧಿ’ ಎಂದು ಬಣ್ಣಿಸಿದ ಅಧಿಕಾರಿಯೊಬ್ಬರು, ಇದನ್ನು ನಿಗದಿತ ಕಾರ್ಯಸೂಚಿಯ ಅಡಿಯಲ್ಲಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಮಾಹಿತಿಯ ಪ್ರಕಾರ, ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಸಿಐಡಿ ಪ್ರಧಾನ ಕಚೇರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸುಖು ಅವರಿಗೆ ಉಪಹಾರವಾಗಿ ಹೋಟೆಲ್ ರಾಡಿಸನ್ ಬ್ಲೂನಿಂದ ಕನಿಷ್ಠ ಮೂರು ಬಾಕ್ಸ್ ಸಮೋಸಾಗಳನ್ನು ತರಿಸಲಾಗಿತ್ತು.
ಹಿರಿಯ ಅಧಿಕಾರಿಯೊಬ್ಬರು ಸಲ್ಲಿಸಿದ ವಿಚಾರಣಾ ವರದಿಯ ಪ್ರಕಾರ, ತಿಂಡಿಯನ್ನು ಅವರ ಭದ್ರತಾ ಸಿಬ್ಬಂದಿಗೆ ನೀಡಲಾಗಿತ್ತು.

ರಾಜ್ಯದ ಸುಖು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ವಿರೋಧ ಪಕ್ಷ ಬಿಜೆಪಿ, ಸಿಐಡಿ ತನಿಖೆಗೆ ಆದೇಶಿಸಿರುವುದು ಕಾಂಗ್ರೆಸ್ ಗೆ ‘ಮುಖ್ಯಮಂತ್ರಿ’ ಸಮೋಸಾದ ಬಗ್ಗೆ ಮಾತ್ರ ಕಾಳಜಿ ಇದೆಯೇ ಹೊರತು ರಾಜ್ಯದ ಅಭಿವೃದ್ಧಿಯ ಬಗ್ಗೆ ಅಲ್ಲ ಎಂಬುದನ್ನು ತೋರಿಸುತ್ತದೆ ಎಂದು ಹೇಳಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version