12:55 AM Tuesday 10 - November 2026

ನಿರುದ್ಯೋಗಿಗಳಿಗೆ ಸಿಹಿ ಸುದ್ದಿ: SBI ನಲ್ಲಿದೆ ಹಲವು ಉದ್ಯೋಗಗಳು

sbi
14/04/2021

ನವದೆಹಲಿ:  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ತಜ್ಞ ಕೇಡರ್ ಅಧಿಕಾರಿಗಳ ನೇಮಕಾತಿಗೆ ಮುಂದಾಗಿದೆ. ಅಲ್ಲದೆ ಕ್ಲರ್ಕ್ ಹುದ್ದೆಗಳ ನೇಮಕ ಮಾಡಿಕೊಳ್ಳುವುದಾಗಿ ಹೇಳಿದೆ.

ಎಸ್ ಬಿ ಐನಲ್ಲಿ ಒಟ್ಟು 148 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಜಿ ಸಲ್ಲಿಸಲು ಮೇ 3 ಕೊನೆಯ ದಿನವಾಗಿದೆ. ಅರ್ಜಿದಾರರು ಎಸ್ ಬಿ ಐ  ಅಧಿಕೃತ ವೆಬ್ಸೈಟ್ ನಲ್ಲಿ ಅರ್ಜಿ ಸಲ್ಲಿಸಬೇಕು.

ವ್ಯವಸ್ಥಾಪಕ (ರಿಸ್ಕ್ ಮ್ಯಾನೇಜ್ ) 1 ಹುದ್ದೆ, ವ್ಯವಸ್ಥಾಪಕ (ಕ್ರೆಡಿಟ್ ವಿಶ್ಲೇಷಕ) 2 ಹುದ್ದೆ, ಹಿರಿಯ ವಿಶೇಷ ಕಾರ್ಯನಿರ್ವಾಹಕ 1 ಹುದ್ದೆ, ಹಿರಿಯ ವಿಶೇಷ ಕಾರ್ಯನಿರ್ವಾಹಕ (ಟಿಎಂಜಿ) 1 ಹುದ್ದೆ, ಹಿರಿಯ ವಿಶೇಷ ಕಾರ್ಯನಿರ್ವಾಹಕ 1 ಹುದ್ದೆ, ಹಿರಿಯ ಕಾರ್ಯನಿರ್ವಾಹಕ (ಚಿಲ್ಲರೆ ಮತ್ತು ಸಹಾಯಕ) 1 ಹುದ್ದೆ, ಹಿರಿಯ ಕಾರ್ಯನಿರ್ವಾಹಕ (ಹಣಕಾಸು) 1 ಹುದ್ದೆ, ಹಿರಿಯ ಕಾರ್ಯನಿರ್ವಾಹಕ (ಮಾರ್ಕೆಟಿಂಗ್) 1 ಹುದ್ದೆ, ಐಟಿ-ಡಿಜಿಟಲ್ ಬ್ಯಾಂಕಿಂಗ್ 1 ಹುದ್ದೆ, ವ್ಯವಸ್ಥಾಪಕ 1 ಹುದ್ದೆ ಸೇರಿದಂತೆ ವ್ಯವಸ್ಥಾಪಕ (ಕ್ರೆಡಿಟ್ ವಿಶ್ಲೇಷಕ) 45 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಇದಲ್ಲದೆ, ಉಪ ವ್ಯವಸ್ಥಾಪಕ (ಚಾರ್ಟರ್ಡ್ ಅಕೌಂಟೆಂಟ್) 6 ಹುದ್ದೆಗಳು, ಸಲಹೆಗಾರ 4 ಹುದ್ದೆಗಳು, ಡೇಟಾ ವಿಶ್ಲೇಷಕರ 8 ಹುದ್ದೆಗಳು ಮತ್ತು ಕ್ಲರ್ಕ್ 67 ಹುದ್ದೆಗಳ ನೇಮಕ ನಡೆಯಲಿದೆ. ಅಭ್ಯರ್ಥಿಗಳು ಮುಖ್ಯ ದಾಖಲೆಗಳನ್ನು ಆನ್ಲೈನ್ ನಲ್ಲಿ ಅಪ್ಲೋಡ್ ಮಾಡಬೇಕಾಗುತ್ತದೆ. ನಂತ್ರ ಸಂದರ್ಶನಕ್ಕೆ ಹಾಜರಾಗಬೇಕು.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version