ಕುಂದಾಪುರ: ಪರಿಶಿಷ್ಟ ಜಾತಿ, ಪಂಗಡ ಕುಂದು ಕೊರತೆ ಸಭೆ, ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿ ಕಾರ್ಯಾಗಾರ
ಕುಂದಾಪುರ: ಗ್ರಾಮಾಂತರ ಪೊಲೀಸ್ ಠಾಣೆ ಕಂಡ್ಲೂರು, ಗ್ರಾಮ ಪಂಚಾಯತ್ ಕಂದಾವರ, ದಲಿತ ಶ್ರೇಯೋಭಿವೃದ್ಧಿ ಕಂದಾವರ ಮೂಡ್ಲಕಟ್ಟೆ, ಎಸ್ ಡಿ ಎಂ ಸಿ ಸಮನ್ವಯ ವೇದಿಕೆ ಉಡುಪಿ, ಇವರ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ ಕುಂದು ಕೊರತೆ ಸಭೆ ಮತ್ತು ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾಮರ್ಥ್ಯ ಮತ್ತು ಮಾಹಿತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂದಾವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಬಾಬಿ ವಹಿಸಿದ್ದರು. ಸಮುದಾಯದ ಮುಖಂಡರ ಅಹವಾಲುಗಳಿಗೆ ಗ್ರಾಮಾಂತರ ಪೊಲೀಸ್ ಠಾಣೆಯ ಪಿ ಎಸ್ ಐ ಪವನ್ ನಾಯ್ಕ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಂದಾವರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸಂಜೀವ ಅವರು, ಇಲಾಖೆಯಿಂದ ಸಿಗುವ ಸೌಲಭ್ಯ ಮತ್ತು ವಿವಿಧ ಯೋಜನೆಗಳ ಮಾಹಿತಿ ನೀಡಿದರು. ಕೆ.ರಘುವೀರ್ ನಿವೃತ್ತ ಮುಖ್ಯೋಪಾಧ್ಯಾಯರು ಮತ್ತು ಗಣೇಶ ಸಂಚಾಲಕರು ಡಿ ಎಸ್ ಎಸ್ ಕಂದಾವರ ಮುಡ್ಲಕಟ್ಟೆ, ಶ್ರಿ ಗಣೇಶ ಗ್ರಾಮ ಪಂಚಾಯತ್ ಗುಲ್ವಾಡಿ, ಶ್ರಿ ಬಾಬು ಉಳ್ಳುರು, ಶಶಿ ಬಳ್ಕೂರು, ಬಾಬಣ್ಣ ಹಳನಾಡು, ಸುಶೀಲ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಸಾಮಾಜಿಕ ನ್ಯಾಯ ಸಮಿತಿ ಅದ್ಯಕ್ಷರು ಗ್ರಾಮ ಪಂಚಾಯತ್ ಬಳ್ಕೂರು ಉಪಸ್ಥಿತರಿದ್ದರು.
ಆದರ್ಶ ಕೆಲ ನಿರ್ದೇಶಕರು ಸ್ಪರ್ಧಾ ಸಾರಥಿ ಅಕಾಡೆಮಿ ಕುಂದಾಪುರ ರವರು ವಿದ್ಯಾರ್ಥಿ – ವಿದ್ಯಾರ್ಥಿನಿ ರವರೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಸಾಮರ್ಥ್ಯ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದ ದಲಿತ ಮುಖಂಡರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಎಸ್ ವಿ ನಾಗರಾಜ್ ಸ್ವಾಗತಿಸಿದರು, ಮೋಹನ್ ಚಂದ್ರ ಕಾಳಾವರ ವಂದಿಸಿದರು, ಎಸ್.ವಿ.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.





























