10:00 PM Saturday 6 - September 2025

ಜನಾರ್ಧನ ರೆಡ್ಡಿ ಕಟ್ಟಿದ ‘ಬುರುಡೆ ಕಥೆ’ಗೆ ಕಾನೂನಿನ ಬಿಸಿ ಮುಟ್ಟಿಸಿದ ಶಶಿಕಾಂತ್ ಸೆಂಥಿಲ್!

sasikanth senthil
06/09/2025

ಬೆಂಗಳೂರು: ಧರ್ಮಸ್ಥಳ ಪ್ರಕರಣದಲ್ಲಿ ದೊಡ್ಡ ಷಡ್ಯಂತ್ರ ನಡೆದಿದ್ದು, ಇದರಲ್ಲಿ ಕಾಂಗ್ರೆಸ್ ಸಂಸದ ಹಾಗೂ ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ಕೈವಾಡವಿದೆ ಎಂದು ಶಾಸಕ ಜನಾರ್ಧನ ರೆಡ್ಡಿ ಆರೋಪ ಮಾಡಿದ್ದರು. ಈ ಸಂಬಂಧ ಇದೀಗ ಕಾನೂನು ಸಮರಕ್ಕೆ ಶಶಿಕಾಂತ್ ಸೆಂಥಿಲ್ ಮುಂದಾಗಿದ್ದು, ಶಾಸಕ ಜರ್ನಾದನ ರೆಡ್ಡಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ವಕೀಲ ಸೂರ್ಯ ಮುಕುಂದರಾಜ್ ಜೊತೆ ಸಿಟಿ ಸಿವಿಲ್ ಕೋರ್ಟ್ ಗೆ ಆಗಮಿಸಿದ ಸಸಿಕಾಂತ್ ಸಿಂಥೆಲ್, ಶಾಸಕ ಜರ್ನಾದನ ರೆಡ್ಡಿ ವಿರುದ್ಧ ಖಾಸಗಿ ದೂರು ಸಲ್ಲಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.

ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಿದ್ದು, ಸೆಪ್ಟೆಂಬರ್​ 11 ರಂದು 42ನೇ ಎಸಿಎಂಎಂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ‌ದಲ್ಲಿ ವಿಚಾರಣೆ ನಡೆಯಲಿದೆ.

ದೂರು ಸಲ್ಲಿಕೆ ಬಳಿಕ ಮಾಧ್ಯಮಗಳ ಜೊತೆ ಮಾತಾಡಿದ ಸಂಸದ ಶಶಿಕಾಂತ್ ಸೆಂಥಿಲ್​,  ಬುರುಡೆ ಕೇಸ್​ ನಲ್ಲಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ  ನನ್ನ ಹೆಸರು ತಗೊಂಡಿದ್ದಾರೆ. ಇದೀಗ ಕೋರ್ಟ್​​ನಲ್ಲೇ ಉತ್ತರ ಕೊಡಲಿ ಎಂದು ಸಸಿಕಾಂತ್ ಸೆಂಥಿಲ್ ಹೇಳಿದ್ದಾರೆ.

ಈ ಕೇಸಲ್ಲಿ ನನ್ನ ಹೆಸರು ಯಾಕೆ ಬಂತು, ಗೊತ್ತಿಲ್ಲ. ನನ್ನ ಹೆಸರನ್ನ ತಮಿಳುನಾಡಿನ ಮಾಜಿ ಪೊಲೀಸ್ ಅಧಿಕಾರಿ ಅಲ್ಲಿ ತಗೊಂಡಿದ್ದಾರೆ. ಇದು ಹೀಗೆ ಬಿಟ್ಟರೆ, ಒಂದು ಸ್ಟೋರಿ ಕ್ರಿಯೆಟ್ ಅಗುತ್ತೆ.ನಾನು ಲೀಗಲ್ ಸಿಸ್ಟಮ್ ನಲ್ಲಿ ಹೋಗ್ತೀದ್ದೀನಿ. ಸತ್ಯ ಏನಿದೆ ತನಿಖೆಯಿಂದ ಹೊರ ಬರಲಿ ಎಂದು  ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version