5:54 PM Wednesday 15 - October 2025

ಶಾಕಿಂಗ್ ನ್ಯೂಸ್: ಕರ್ನಾಟಕದ ಈ ಆಸ್ಪತ್ರೆಯಲ್ಲಿ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ

06/12/2020

ಶಿವಮೊಗ್ಗ:  ಜೀವ ಉಳಿಸುವ ಆಸ್ಪತ್ರೆಗಳಲ್ಲಿಯೇ ಇಂತಹ ಘಟನೆ ನಡೆದರೆ, ಇನ್ನು ಬೇರೆ ಸ್ಥಳಗಳಲ್ಲಿ ಜನರ ಪರಿಸ್ಥಿತಿಯೇನು ಎಂದು ಸದ್ಯ ಪ್ರಶ್ನಿಸುವಂತಹ ಘಟನೆಯೊಂದು ನಡೆದಿದ್ದು, ಆಸ್ಪತ್ರೆಯ ಸಿಬ್ಬಂದಿಯೇ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಘಟನೆಯೊಂದು ನಡೆದಿದೆ.

ಇದು ಎಲ್ಲೋ ದೂರದ ಉತ್ತರಪ್ರದೇಶದಲ್ಲಿ ನಡೆದಿರುವ ಘಟನೆಯಲ್ಲ, ರಾಜ್ಯದ ಶಿವಮೊಗ್ಗದ  ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿರುವ ಘಟನೆಯಾಗಿದೆ. ಆಸ್ಪತ್ರೆಯ ಡಿ ದರ್ಜೆಯ ಸಿಬ್ಬಂದಿ ಬಾಲಕಿಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ನಡೆಸಿದ್ದಾರೆ.

ಘಟನೆ ಸಂಬಂಧ ಆರೋಪಿ ನೌಕರನನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version