ಹಿಂದಿ ಗೊತ್ತಿರಬೇಕು: ಭಾಷಣ ಅನುವಾದಕ್ಕೆ ಮುಂದಾದ ಡಿಎಂಕೆ ನಾಯಕನ ವಿರುದ್ಧ ನಿತೀಶ್ ಫುಲ್ ಗರಂ

ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ನಾಯಕ ಟಿ.ಆರ್.ಬಾಲು ಅವರು ಮೂರು ಗಂಟೆಗಳ ಕಾಲ ನಡೆದ ಬಿಜೆಪಿ ನಾಯಕರ ಸಭೆಯಲ್ಲಿ ಹಿಂದಿಯಲ್ಲಿ ಮಾಡಿದ ಭಾಷಣವನ್ನು ಭಾಷಾಂತರಿಸುವಂತೆ ಕೇಳಿದಾಗ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ಅಧ್ಯಕ್ಷ ನಿತೀಶ್ ಕುಮಾರ್ ಕಿಡಿಕಾರಿದ ಘಟನೆ ನಡೆದಿದೆ.
ನಿತೀಶ್ ಕುಮಾರ್ ಅವರು ಬಿಜೆಪಿ ನಾಯಕರನ್ನು ಉದ್ದೇಶಿಸಿ ಮಾತನಾಡುವಾಗ ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಮತ್ತು ಟಿ.ಆರ್.ಬಾಲು ಕೂಡ ಹಾಜರಿದ್ದರು. ನಿತೀಶ್ ಏನು ಹೇಳುತ್ತಿದ್ದಾರೆಂದು ಅರ್ಥವಾಗದ ಟಿ.ಆರ್.ಬಾಲು, ಇನ್ನೊಂದು ಬದಿಯಲ್ಲಿ ಕುಳಿತಿದ್ದ ರಾಷ್ಟ್ರೀಯ ಜನತಾ ದಳದ ರಾಜ್ಯಸಭಾ ಸಂಸದ ಮನೋಜ್ ಕೆ.ಝಾ ಅವರಿಗೆ ಭಾಷಣವನ್ನು ಭಾಷಾಂತರಿಸಬಹುದೇ ಎಂದು ಕೇಳಿಕೊಂಡರು.
ಮನೋಜ್ ಝಾ ಅವರು ನಿತೀಶ್ ಕುಮಾರ್ ಅವರಿಂದ ಅನುಮತಿ ಕೋರಿದಾಗ, “ನಾವು ನಮ್ಮ ದೇಶವನ್ನು ಹಿಂದೂಸ್ತಾನ್ ಎಂದು ಕರೆಯುತ್ತೇವೆ ಮತ್ತು ಹಿಂದಿ ನಮ್ಮ ರಾಷ್ಟ್ರೀಯ ಭಾಷೆ. ನಾವು ಭಾಷೆಯನ್ನು ತಿಳಿದಿರಬೇಕು” ಎಂದಿದ್ದಾರೆ.
ನಂತರ ನಿತೀಶ್ ಕುಮಾರ್ ಅವರು ಮನೋಜ್ ಝಾ ಅವರನ್ನು ತಮ್ಮ ಭಾಷಣವನ್ನು ಭಾಷಾಂತರಿಸದಂತೆ ಕೇಳಿಕೊಂಡರು.
ಮುಂಬರುವ 2024 ರ ಲೋಕಸಭಾ ಚುನಾವಣೆಗೆ ಸೀಟು ಹಂಚಿಕೆ ಮತ್ತು ಪ್ರಚಾರ ಕಾರ್ಯತಂತ್ರಗಳಂತಹ ವಿಷಯಗಳ ಬಗ್ಗೆ ಚರ್ಚಿಸಲು ಬಿಜೆಪಿ ಬಣ ಪಕ್ಷಗಳು ದೆಹಲಿಯಲ್ಲಿ ತಮ್ಮ ನಾಲ್ಕನೇ ಸಭೆಯನ್ನು ಕರೆದಿತ್ತು.