5:00 PM Wednesday 28 - January 2026

ಸಿಬ್ಬಂದಿಯಿಂದ ಶೂ ತೊಡಿಸಿಕೊಂಡ ಸಚಿವ ಮುರುಗೇಶ್ ನಿರಾಣಿ

27/02/2021

ರಾಯಚೂರು: ಗಣಿ ಹಾಗೂ ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅವರು ಸಿಬ್ಬಂದಿಗಳಿಂದಲೇ ಶೂ ತೊಡಿಸಿಕೊಂಡು  ವಿವಾದಕ್ಕೀಡಾಗಿದ್ದು, ಸಿಬ್ಬಂದಿಗಳಿಂದ ಇಂತಹ ಕೆಲಸ ಮಾಡಿಸಿಕೊಳ್ಳುವುದು ಅಮಾನವೀಯ ಎಂದು ಸಚಿವರ ವಿರುದ್ಧ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಲಿಂಗಸುಗೂರಿನ ಹಟ್ಟಿ ಚಿನ್ನದ ಗಣಿಗೆ ಭೇಟಿ ನೀಡಿದ ಮುರುಗೇಶ್ ನಿರಾಣಿ ಅಧಿಕಾರಿಗಳ ಸಭೆಯ ಬಳಿಕ ಗಣಿ ವೀಕ್ಷಣೆಗೆ ತೆರಳಿದ್ದಾರೆ. ಈ ಸಂದರ್ಭದಲ್ಲಿ ಅವರು ಅಲ್ಲಿನ ಸಿಬ್ಬಂದಿಯಿಂದ ಕಾಲಿಗೆ ಶೂ ತೊಡಿಸಿಕೊಂಡಿದ್ದಾರೆ.

ಜನರಿಗೆ ಸಂಸ್ಕೃತಿಗಳ ಬಗ್ಗೆ ಪಾಠ ಮಾಡಿ, ತಾವು ಸಿಬ್ಬಂದಿಯ ಕೈಗಳಿಂದ ಶೂ ಹಾಕಿಸಿಕೊಳ್ಳುತ್ತಿದ್ದಾರೆ.  ಸಚಿವರಾಗಿ ಅವರು ಈ ರೀತಿ ದುರಾಂಹಕಾರಿ ವರ್ತನೆ ತೋರುವುದು ಸರಿಯಲ್ಲ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.

ಇತ್ತೀಚಿನ ಸುದ್ದಿ

Exit mobile version