8:06 PM Thursday 16 - October 2025

ಸಿದ್ದರಾಮಯ್ಯ ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಸಿದರು: ನಳಿನ್ ಕುಮಾರ್ ಕಟೀಲ್ ವಾಗ್ದಾಳಿ

naleen kumar kateel
08/05/2022

ಬೆಂಗಳೂರು: ಸಿದ್ದರಾಮಯ್ಯ ಡ್ರಗ್ಸ್ ಹಣದಲ್ಲಿ ಸರ್ಕಾರ ನಡೆಸಿದರು, ನಮ್ಮ ಸರ್ಕಾರ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಜೆಪಿ ಕಚೇರಿಯಲ್ಲಿ ಭಾನುವಾರ ಯುವ ಮೋರ್ಚಾ ಕಾರ್ಯಕಾರಿಣಿಯಲ್ಲಿ ಮಾತನಾಡಿದ ಅವರು,  ಗಾಂಧೀಜಿ ಭಾರತವು ರಾಮರಾಜ್ಯವಾಗಬೇಕು ಎಂದಿದ್ದರೇ ವಿನಃ ಜಾತ್ಯತೀತವಾಗ ಬೇಕು ಅಂದಿರಲಿಲ್ಲ. ಭಾರತ ರಾಮ ರಾಜ್ಯವಾಗಲು ಪ್ರತಿ ವ್ಯಕ್ತಿಯೂ ರಾಮ ಆಗಬೇಕು ಎಂದರು.

ಚಾ ಮಾರುವ ಹುಡುಗ ಪ್ರಧಾನಿ ಆಗಬಲ್ಲ ಎನ್ನುವುದನ್ನು ಬಿಜೆಪಿ ತೋರಿಸಿದೆ. ಮತಗಟ್ಟೆಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಇಂದು ಕೇಂದ್ರ ಗೃಹ ಸಚಿವರಾಗಿದ್ದಾರೆ. ಹಳ್ಳಿಯಿಂದ ಬಂದ ಸಾಮಾನ್ಯನೊಬ್ಬ ಬಿಜೆಪಿ ರಾಜ್ಯಾಧ್ಯಕ್ಷನಾಗುತ್ತಾನೆ, 3 ಬಾರಿ ಸಂಸದನಾಗುತ್ತಾನೆ. ಇದು ಬಿಜೆಪಿಯಿಂದ ಮಾತ್ರವೇ ಸಾಧ್ಯ  ಎಂದು ನಳಿನ್ ಕುಮಾರ್ ಕಟೀಲ್ ಹೇಳಿದರು.

ರಾಷ್ಟ್ರಭಕ್ತಿ, ಸಾಮಾಜಿಕ ಬದ್ಧತೆಯಿಂದ ನಾವು ರಾಜಕೀಯಕ್ಕೆ ಬಂದವರು. ಕಾಂಗ್ರೆಸ್ ನಲ್ಲಿ ಪದಾಧಿಕಾರಿಗಳ ಟೀಂ ಸಾಂವಿಧಾನಿಕವಾಗಿಲ್ಲ. ಕಾಂಗ್ರೆಸ್ ನಲ್ಲಿ ಅವ್ಯವಸ್ಥೆ ತುಂಬಿದೆ. ಅವರಿಗೆ ಪಕ್ಷ ಕಟ್ಟಲು ಗೊತ್ತಿಲ್ಲ. ಇನ್ನು ನಾಡನ್ನು ಹೇಗೆ ಕಟ್ಟುತ್ತಾರೆ ಎಂದು ವ್ಯಂಗ್ಯವಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಡಬ ಚರ್ಚ್ ದಾಳಿ: ದೂರು ನೀಡಿದವರ ವಿರುದ್ಧವೇ ಸುಳ್ಳು ದೂರು | ಎಸ್ ಡಿಪಿಐ ಆಕ್ರೋಶ

ʼ ಅಮ್ಮʼ ಎಂದರೆ ಆತ್ಮಸ್ಥೈರ್ಯದ ಸಂಕೇತ | ಬದುಕಿನ ಪುಟಗಳನ್ನು ತೆರೆದುನೋಡಿದಾಗ

ಕಾಡಿನಲ್ಲಿ ಏಕಾಂತದಲ್ಲಿದ್ದ ಪ್ರೇಮಿಗಳ ಮೇಲೆ ಹುಲಿ ದಾಳಿ: ಯುವಕ ಸಾವು

ಖ್ಯಾತ ಹಾಸ್ಯ ನಟ ಮೋಹನ್ ಜುನೇಜ ಇನ್ನಿಲ್ಲ

ಹೊಟೇಲ್ ನಿಂದ ಖರೀದಿಸಿದ ಆಹಾರದಲ್ಲಿ ಹಾವಿನ ಚರ್ಮ ಪತ್ತೆ!

ಇತ್ತೀಚಿನ ಸುದ್ದಿ

Exit mobile version