ಆಸ್ತಿ ತನ್ನ ಹೆಸರಿಗೆ ಬರೆಯಲಿಲ್ಲ ಎಂದು ತಾಯಿಯನ್ನೇ ಭಯಾನಕವಾಗಿ ಕೊಂದ ಪಾಪಿ ಪುತ್ರ!

arest
13/12/2023

ಲಕ್ನೋ: ತಾಯಿ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸಲು ನಿರಾಕರಿಸಿದಳು ಎಂದು ಆಕ್ರೋಶಗೊಂಡ ಪುತ್ರನೋರ್ವ ತಾಯಿಯ ಶಿರಚ್ಛೇದ ನಡೆಸಿ, ರುಂಡದೊಂದಿಗೆ ಪರಾರಿಯಾದ ಘಟನೆ ಉತ್ತರಪ್ರದೇಶದ ಸೀತಾಪುರ ಜಿಲ್ಲೆಯ ತಾಳಂಗಾವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಕಮಲಾ ದೇವಿಯನ್ನು (65) ಹತ್ಯೆಗೀಡಾದ ತಾಯಿಯಾಗಿದ್ದು, ದಿನೇಶ್ ಪಾಸಿ (35) ತಾಯಿಯನ್ನೇ ಭೀಕರವಾಗಿ ಹತ್ಯೆ ನಡೆಸಿದ ಪುತ್ರನಾಗಿದ್ದಾನೆ.ಜಿಲ್ಲೆಯ ಮೇಜಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೃಷಿ ಬ್ಲೇಡ್ ನಿಂದ ತಾಯಿಯನ್ನು ಹತ್ಯೆ ನಡೆಸಿದ ಬಳಿಕ ರುಂಡದೊಂದಿಗೆ ಪುತ್ರ ಪರಾರಿಯಾಗಿದ್ದಾನೆ. ಸದ್ಯ ಆರೋಪಿಗಾಗಿ ಸೀತಾಪುರ ಪೊಲೀಸರು ಶೋಧ ನಡೆಸುತ್ತಿದ್ದಾರೆ.

ಆರೋಪಿಯ ಪತ್ತೆಗೆ ವಿಶೇಷ ತಂಡವನ್ನು ರಚಿಸಲಾಗಿದೆ. ದಿನೇಶ್ ಮದ್ಯವ್ಯಸನಿಯಾಗಿದ್ದ. ಈತ ಪ್ರತಿದಿನ ಕುಡಿದು ಬಂದು ತಾಯಿಯೊಂದಿಗೆ ಜಗಳವಾಡುತ್ತಿದ್ದು, ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಕಿರುಕುಳ ನೀಡುತ್ತಿದ್ದ. ಅದೇ ರೀತಿ ಶನಿವಾರವೂ ಇವರಿಬ್ಬರ ಮಧ್ಯೆ ಜಗಳ ನಡೆದಿದ್ದು, ಜಗಳ ವಿಕೋಪಕ್ಕೆ ತಿರುಗಿ ತಾಯಿಯ ರುಂಡವನ್ನು ಕತ್ತರಿಸಿ, ರುಂಡದೊಂದಿಗೆ ಪರಾರಿಯಾಗಿದ್ದಾನೆ ಎಂದು ಎಸ್ ಪಿ ಚಕ್ರೇಶ್ ಮಿಶ್ರಾ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version