8:17 PM Wednesday 17 - September 2025

“ಚಂದಕಿಂತ ಚಂದ ನೀನೇ ಸುಂದರ” ಹಾಡು ಹಾಡಿದ್ದ ಗಾಯಕ ಇನ್ನಿಲ್ಲ!

udas
26/02/2024

ಕಳೆದ ಹಲವು ತಿಂಗಳುಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಜನಪ್ರಿಯ ಗಾಯಕ ಪಂಕಜ್ ಉಧಾಸ್ ಅವರು ಫೆಬ್ರವರಿ 26ರಂದು ಕೊನೆಯುಸಿರೆಳೆದಿದ್ದಾರೆ.

ಪಂಕಜ್ ಉಧಾಸ್ ಅವರ ನಿಧನವಾರ್ತೆಯನ್ನು ಪುತ್ರಿ ನಯಾಬ್ ಉಧಾಸ್ ಖಚಿತಪಡಿಸಿದ್ದು, ಕುಟುಂಬಸ್ಥರು ಸಾಮಾಜಿಕ ಜಾಲತಾಣಗಳ ಮೂಲಕ ಈ ಸುದ್ದಿಯನ್ನು ಬಹಿರಂಗಪಡಿಸಿದ್ದಾರೆ.
ಬಾಲಿವುಡ್ ನಲ್ಲಿ ಹಲವಾರು ಹಿಟ್ ಹಾಡುಗಳನ್ನು ನೀಡಿದ್ದ ಪಂಕಜ್ ಉಧಾಸ್, ಕಿಚ್ಚ ಸುದೀಪ್ ಅಭಿನಯದ ಸ್ಪರ್ಶ ಸಿನಿಮಾದ “ಬರೆಯದ ಮೌನದ ಕವಿತೆ ಹಾಡಾಯಿತು” ಮತ್ತು “ಚಂದಕಿಂತ ಚಂದ ನೀನೇ ಸುಂದರ” ಎಂಬ ಹಾಡಿಗೆ ಧ್ವನಿಯಾಗಿದ್ದರು.

ಪಂಕಜ್ ಉಧಾಸ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು, ಸಂಗೀತ ಕ್ಷೇತ್ರದ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version