4:17 AM Thursday 16 - October 2025

ವಿವಾಹ ವಾರ್ಷಿಕೋತ್ಸವ-ದೀಪಾವಳಿ ಸಂಭ್ರಮದಲ್ಲಿ ನಟಿ ಸೊನಾಲಿ

15/11/2020

ನವದೆಹಲಿ: ತಮ್ಮ ವಿವಾಹ ವಾರ್ಷಿಕೋತ್ಸವ ಹಾಗೂ ದೀಪಾವಳಿ ಪ್ರಯುಕ್ತ 45 ವರ್ಷದ ನಟಿ ಸೋನಾಲಿ ಅವರು ತಮ್ಮ ಕುಟುಂಬದ ಜೊತೆಗೆ ಪ್ರವಾಸ ಕೈಗೊಂಡಿದ್ದು, ತಮ್ಮ ರಜಾ ದಿನವನ್ನು ಎಂಜಾಯ್ ಮಾಡುತ್ತಿದ್ದಾರೆ. ಈ ಕುರಿತ ಫೋಟೋಗಳನ್ನು ಅವರು ಇನ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಸೊನಾಲಿ ಅವರ ಪತಿ ಚಲನಚಿತ್ರ ನಿರ್ಮಾಪಕ ಗೋಲ್ಡಿ ಬೆಹ್ಲ್ ಹಾಗೂ ಮಗ ರಣವೀರ್ ಹಾಗೂ ಅವರ ಮನೆಯ ನಾಯಿ ಎಲ್ಲರೂ ಸೇರಿ ಪ್ರವಾಸಕ್ಕೆ ತೆರಳಿದ್ದಾರೆ.  ಪ್ರವಾಸದ ಸಂದರ್ಭದಲ್ಲಿ ಅವರು ಸುಂದರವಾದ ಈಜುಕೊಳದಲ್ಲಿ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿದ್ದು, ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

sonali bendre

ಇನ್ನೂ ನಮ್ಮ ಕುಟುಂಬದಿಂದ ದೀಪಾವಳಿಯ ಶುಭಾಶಯಗಳು ಎಂದು ತಮ್ಮ ಅಭಿಮಾನಿಗಳಿಗೆ ಅವರು ಹೇಳಿದ್ದಾರೆ. ತಾವು ಕಾರಿನಲ್ಲಿ ಪ್ರಯಾಣಿಸುತ್ತಿರುವ ಫೋಟೋವನ್ನು ಸೊನಾಲಿ ಅವರು ಹಂಚಿಕೊಂಡಿದ್ದಾರೆ. ನಾವು ಜೊತೆಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ

Exit mobile version