10:03 PM Wednesday 22 - October 2025

ಒಡಿಶಾ ರೈಲು ದುರಂತ: ಸಂತ್ರಸ್ತ ಕುಟುಂಬಕ್ಕೆ 10 ಕೋಟಿ ನೀಡುವೆ ಸ್ವೀಕರಿಸಿ ಎಂದ ಆರೋಪಿತ ವ್ಯಕ್ತಿ..!

17/06/2023

ಜೂನ್ 2 ರಂದು ಒಡಿಶಾ ರೈಲು ದುರಂತದಲ್ಲಿ 288 ಮಂದಿ ಸಾವನ್ನಪ್ಪಿದ ಕುಟುಂಬಗಳ ಸಂತ್ರಸ್ತರಿಗೆ ದೇಣಿಗೆಯಾಗಿ 10 ಕೋಟಿ ರೂಪಾಯಿಗಳನ್ನು ನೀಡುವೆ ಸ್ವೀಕರಿಸಿ ಎಂದು ವಿವಿಧ ಕೇಸ್ ಗಳಲ್ಲಿ ಬಂಧನದಲ್ಲಿರುವ ಸುಕೇಶ್ ಚಂದ್ರಶೇಖರ್ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದಾರೆ.

ಈ ಕೊಡುಗೆಯು ನನ್ನ ಕಾನೂನುಬದ್ಧ ಗಳಿಕೆಯ ಮೂಲದಿಂದ ಬಂದ ನನ್ನ ವೈಯಕ್ತಿಕ ನಿಧಿಯಿಂದ ಬಂದಿದೆ. ಅದು ಸಂಪೂರ್ಣವಾಗಿ ತೆರಿಗೆಗೆ ಒಳಪಟ್ಟಿದೆ ಮತ್ತು ರಿಟರ್ನ್ಸ್ ಫೈಲಿಂಗ್‌ ಗಳ ಜೊತೆಗೆ ದಾಖಲಾತಿಗಳನ್ನು 10 ಕೋಟಿ ರೂಪಾಯಿಗಳ ಡಿಮ್ಯಾಂಡ್ ಡ್ರಾಫ್ಟ್‌ನೊಂದಿಗೆ ಒದಗಿಸುವೆ ಎಂದು ಚಂದ್ರಶೇಖರ್ ಹೇಳಿದ್ದಾನೆ.

ಪ್ರಸ್ತುತ ತಾನು ಮಂಡೋಲಿ ಜೈಲಿನಲ್ಲಿರುವುದಾಗಿ ಆತ ಸಚಿವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ಈ ಮಧ್ಯೆ ವಂಚಕ ಸುಕೇಶ್ ಚಂದ್ರಶೇಖರ್ ದೆಹಲಿಯ ರಾಜ್ಯಪಾಲ ವಿಕೆ ಸಕ್ಸೇನಾಗೆ ಪತ್ರ ಬರೆದಿದ್ದಾರೆ. ಸರ್ಕಾರವು ಈಗಾಗಲೇ ಸಂತ್ರಸ್ತರಿಗೆ ಅಗತ್ಯ ಇರುವ ಎಲ್ಲವನ್ನು ಒದಗಿಸುತ್ತಿರುವುದರಿಂದ ನಾನು ಜವಾಬ್ದಾರಿಯುತ ಮತ್ತು ಉತ್ತಮ ನಾಗರಿಕನಾಗಿ ಈ 10 ಕೋಟಿ ರೂಪಾಯಿಗಳ ನಿಧಿಯನ್ನು ನಿರ್ದಿಷ್ಟವಾಗಿ ಆ ಕುಟುಂಬಗಳು/ಮಕ್ಕಳು, ನಮ್ಮ ಭವಿಷ್ಯದ ಯುವಕರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿರುವವರಿಗೆ ಬಳಸಲು ನೀಡುತ್ತಿದ್ದೇನೆ. ಮೃತರ ಪ್ರತಿ ಮಗುವಿನ ಶಾಲೆ, ಪ್ರೌಢಶಾಲೆ, ಕಾಲೇಜು ಶಿಕ್ಷಣ ವೆಚ್ಚಗಳಿಗೆ ನಿರ್ದಿಷ್ಟವಾಗಿ ಬಳಸಬೇಕಾದ ಕೊಡುಗೆ ಇದಾಗಿದೆ ಎಂದು ಸುಕೇಶ್ ಚಂದ್ರಶೇಖರ್ ತಿಳಿಸಿದ್ದಾನೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version