ಇರಾನ್ ನ ಅತ್ಯಾಧುನಿಕ ಕ್ಷಿಪಣಿಗೆ ಬೆಚ್ಚಿಬಿದ್ದ ಇಸ್ರೇಲ್: ನಮ್ಮನ್ನು ಬೆಂಬಲಿಸಿ ಎಂದು ವಿಶ್ವಕ್ಕೆ ಮೊರೆ
ಜೆರುಸಲೇಂ: ಇರಾನ್ ವಿರುದ್ಧದ ಹೋರಾಟ ಕೇವಲ ಇಸ್ರೇಲ್ ಗೆ ಸಂಬಂಧಿಸಿದ್ದಲ್ಲ, ಇದು ಇಡೀ ವಿಶ್ವದ ಒಳಿತಿಗಾಗಿ ನಡೆಯುತ್ತಿರುವ ಯುದ್ಧವಾಗಿದೆ. ಆದ್ದರಿಂದ ವಿಶ್ವದ ರಾಷ್ಟ್ರಗಳು ನಮಗೆ ಬೆಂಬಲ ನೀಡಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು( Benjamin Netanyahu ) ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಇತ್ತೀಚೆಗೆ ಇರಾನ್ ಸುಮಾರು 4,000 ಕಿ.ಮೀ ದೂರದವರೆಗೆ ಸಾಗಬಲ್ಲ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಉಡಾಯಿಸಿದೆ. ಇದು ಇರಾನ್ ಬಳಿ ಇರುವ ಅತ್ಯಂತ ಅಪಾಯಕಾರಿ ಮತ್ತು ರಹಸ್ಯ ಶಸ್ತ್ರಾಸ್ತ್ರಗಳ ಸಂಕೇತವಾಗಿದೆ ಎಂದು ನೆತನ್ಯಾಹು ಎಚ್ಚರಿಸಿದ್ದಾರೆ.
ಈ ಕ್ಷಿಪಣಿಗಳ ಗುರಿ ಕೇವಲ ಇಸ್ರೇಲ್ ಮಾತ್ರವಲ್ಲ, ಬದಲಾಗಿ ಬರ್ಲಿನ್, ಪ್ಯಾರಿಸ್ ಮತ್ತು ರೋಮ್‌ನಂತಹ ಯುರೋಪಿಯನ್ ರಾಷ್ಟ್ರಗಳ ರಾಜಧಾನಿಗಳ ಮೇಲೆ ದಾಳಿ ಮಾಡುವ ಮತ್ತು ಆ ಮೂಲಕ ಬೆದರಿಕೆ ಹಾಕುವ ಉದ್ದೇಶವನ್ನು ಇರಾನ್ ಹೊಂದಿದೆ ಎಂದು ಇಸ್ರೇಲ್ ಸೇನಾ ಮುಖ್ಯಸ್ಥ ಇಯಾಲ್ ಜಮೀರ್ ಆತಂಕ ವ್ಯಕ್ತಪಡಿಸಿದ್ದಾರೆ.
ಇರಾನ್ ನ ಈ ಅಪಾಯಕಾರಿ ನಡೆ ಇಡೀ ಜಗತ್ತಿಗೆ ಮಾರಕವಾಗಬಹುದು. ಹೀಗಾಗಿ ನಾವು ಇಡೀ ವಿಶ್ವದ ಪರವಾಗಿ ಹೋರಾಡುತ್ತಿದ್ದೇವೆ, ಈ ಯುದ್ಧದಲ್ಲಿ ನಮಗೆ ಸಾಥ್ ನೀಡಿ ಎಂದು ಅರಾದ್ ಪ್ರದೇಶಕ್ಕೆ ಭೇಟಿ ನೀಡಿದ್ದ ವೇಳೆ ನೆತನ್ಯಾಹು ತಿಳಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























