11:26 PM Friday 19 - December 2025

ಉದಯ ನಿಧಿ ಸ್ಟಾಲಿನ್ ತಲೆಗೆ 10 ಕೋಟಿ ಘೋಷಿಸಿದ್ದ ಸ್ವಾಮೀಜಿಗೆ ಸಂಕಷ್ಟ!

udhayanidhi stalin
07/09/2023

ಬೆಂಗಳೂರು:  ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಇದ್ದಂತೆ ಅದನ್ನು ನಿರ್ಮೂಲನೆ ಮಾಡಬೇಕು ಎಂದು ಬ್ರಾಹ್ಮಣ್ಯ ವಾದದ ವಿರುದ್ಧ ಹೇಳಿಕೆ ನೀಡಿದ್ದ ತಮಿಳುನಾಡು ಸಚಿವ, ನಟ ಉದಯ ನಿಧಿ ಸ್ಟಾಲಿನ್ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದ ಸ್ವಾಮೀಜಿಗೆ ಇದೀಗ ಸಂಕಷ್ಟ ಎದುರಾಗಿದೆ.

ಉದಯನಿಧಿ ಸ್ಟಾಲಿನ್ ತಲೆ ಕತ್ತರಿಸಿ ತಂದವರಿಗೆ 10 ಕೋಟಿ ಕೊಡುತ್ತೇನೆ, ಒಂದು ವೇಳೆ ಯಾರೂ ತಂದುಕೊಡದಿದ್ದರೆ, ತಲೆ ಕತ್ತರಿಸಲು ನಾನೇ ರೆಡಿ ಎಂದು  ಸ್ವಾಮೀಜಿ ಕತ್ತಿ ಹಿಡಿದಿದ್ದ ಪೋಸ್ಟ್ ಮಾಡಿದ್ದ ಪತ್ರಕರ್ತರನ ಮೇಲೆ ಕೂಡ ಕೇಸ್ ದಾಖಲಾಗಿದೆ.

ಬೆದರಿಕೆ ಹಾಗೂ ಜನರಲ್ಲಿ ಭಯಹುಟ್ಟಿಸುವ ಉದ್ದೇಶ ಹಾಗೂ ಕಾನೂನು ಸುವ್ಯವಸ್ಥೆ ಹದಗೆಡಿಸಲು ಮತ್ತು ಗಲಭೆ ಸೃಷ್ಟಿಗೆ ಈ ಹೇಳಿಕೆ ಕಾರಣವಾಗಿದ್ದು, ಸ್ವಾಮೀಜಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಡಿಎಂಕೆ ಕಾನೂನು ವಿಭಾಗದ ದೇವನೇಶನ್ ದೂರು ದಾಖಲಿಸಿದ್ದು, ಮಧುರೈ ಸೈಬರ್ ಕ್ರೈಂ ವಿಭಾಗದಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

Exit mobile version