ಬೆಂಗಳೂರು : ಗೃಹ ಪ್ರವೇಶದ ಪೂಜೆ ನಡೆಯುತ್ತಿದ್ದ ವೇಳೆಯಲ್ಲಿ ಮಂಗಳ ಮುಖಿಯರ ಗುಂಪೊಂದು ಮನೆಯೊಳಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಬೆಂಗಳೂರಿನ ಕಲ್ಕೆರೆಯಲ್ಲಿ ನಡೆದಿದೆ. ಬೆಂಗಳೂರಿನ ರಾಮಮೂರ್ತಿ ನಗರದ ಕಲ್ಕೆರೆಯ ಚನ್ನಸಂದ್ರದ ಪೂಜಾ ಗಾರ್ಡನ್ನ 2ನೇ ಹಂತದಲ್ಲಿ ಲೋಕೇಶ್ ಎಂಬವರು ಮನೆಯೊಂದನ್ನು ಕಟ್ಟಿಸಿದ್ದರು. ಗುರುವಾರ ಬೆಳಗ್ಗೆ 7:3...