ಯುಪಿಯಲ್ಲಿ ಮುಫ್ತಿಯನ್ನು ಅರೆಸ್ಟ್ ಮಾಡಲು ಬಂದ ಎನ್ ಐಎ: ಊರವರಿಂದ ತೀವ್ರ ತಡೆ
ಉತ್ತರ ಪ್ರದೇಶದ ಮುಫ್ತಿ ಖಾಲಿದ್ ನದ್ವಿ ಅವರನ್ನು ತನಿಖೆಯ ಹೆಸರಲ್ಲಿ ಬಂಧಿಸಲು ಎನ್ ಐಎ ಅಧಿಕಾರಿಗಳು ಅವರ ಮನೆಗೆ ದಾಳಿ ಇಟ್ಟಾಗ ಅದನ್ನು ಊರವರು ತಡೆದ ಘಟನೆ ವರದಿಯಾಗಿದೆ. ಆನ್‌ಲೈನ್ ಮೂಲಕ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾರ್ಪಡಿಸಲು ಪ್ರೇರಣೆ ನೀಡಿದ ಮತ್ತು ಹಣಕಾಸು ಅವ್ಯವಹಾರದ ಆರೋಪವನ್ನು ಅವರ ಮೇಲೆ ಹೊರಿಸಲಾಗಿದೆ. ಜನರು ಭಾರಿ ಸಂಖ್ಯೆಯಲ್ಲಿ ಸೇರಿದುದರಿಂದ ಅವರನ್ನು ಬಂಧಿಸಲು ಎನ್ ಐ ಎ ಅಧಿಕಾರಿಗಳಿಗೆ ತಡೆ ಉಂಟಾಯಿತು. ಆ ಬಳಿಕ ಪೊಲೀಸರು ಹಾಗೂ ಅಧಿಕಾರಿಗಳ ಮಧ್ಯಪ್ರವೇಶದಿಂದ ಅವರ ಬಂಧನ ನಡೆದಿದೆ ಎಂದು ವರದಿಯಾಗಿದೆ.
ಅಸ್ಸಾಂ ಮಹಾರಾಷ್ಟ್ರ ಉತ್ತರ ಪ್ರದೇಶ ದೆಹಲಿ ಮತ್ತು ಜಮ್ಮು ಕಾಶ್ಮೀರ ಸೇರಿದಂತೆ ದೇಶದ 26 ಕಡೆ, ಎನ್ ಐ ಎ ನಡೆಸಿದ ದಾಳಿಯ ಭಾಗವಾಗಿ ಈ ದಾಳಿ ನಡೆದಿತ್ತು. ನದ್ವಿ ಅವರ ಮನೆಗೆ ಮುಂಜಾನೆ ಎರಡು ಗಂಟೆ 30 ನಿಮಿಷದ ವೇಳೆಗೆ ಈ ದಾಳಿ ನಡೆದಿತ್ತು. ಎನ್ಐಎ ಜೊತೆಗೆ ಉತ್ತರ ಪ್ರದೇಶದ ಭಯೋತ್ಪಾದನಾ ವಿರೋಧಿ ದಳವೂ ಕಾರ್ಯಾಚರಣೆಯಲ್ಲಿ ಭಾಗಿಯಾಗಿತ್ತು. ಭಯೋತ್ಪಾದನಾ ಸಂಘಟನೆಗಳೊಂದಿಗೆ ಇವರಿಗೆ ಸಂಬಂಧ ಇದೆ ಮತ್ತು ಯುವ ಸಮೂಹವನ್ನು ಮೂಲಭೂತವಾದಿಯನ್ನಾಗಿ ಮಾಡುವ ಚಟುವಟಿಕೆಯಲ್ಲಿ ಇವರು ನಿರತರಾಗಿದ್ದಾರೆ ಎಂಬ ಆರೋಪವನ್ನು ಹೊರಿಸಲಾಗಿದೆ.
ಆನ್ಲೈನ್ ಕ್ಲಾಸುಗಳ ಮೂಲಕ ಈ ನದ್ವಿ ಮಕ್ಕಳಿಗೆ ಶಿಕ್ಷಣವನ್ನು ಬೋಧಿಸುತ್ತಿದ್ದರು.
ನಾನು ಕಳೆದ 11 ವರ್ಷಗಳಿಂದ ಶಿಕ್ಷಣ ಭೋದಿಸುತ್ತಿದ್ದೇನೆ. 50 ರೂಪಾಯಿಯಿಂದ 1500 ವರೆಗೆ ನಾನು ಶುಲ್ಕ ಪಡೆದುಕೊಳ್ಳುತ್ತಿದ್ದೇನೆ. ಎನ್ಐಎ ತಂಡದವರು ವಿದೇಶಿ ಫಂಡಿಂಗ್ ನ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ನಾನು ವಿದೇಶಕ್ಕೆ ಹಣ ರವಾನಿಸಿದ್ದೇನೆ ಎಂದವರು ಹೇಳುತ್ತಿದ್ದಾರೆ. ನಾನು ಹಾಗೆ ಮಾಡಿಲ್ಲ. ನನ್ನನ್ನು ತನಿಖಿಸುವುದಕ್ಕಾಗಿ ಕೊಂಡೊಯ್ಯುತ್ತಿದ್ದೇವೆ ಎಂದವರು ಹೇಳಿದ್ದಾರೆ ಎಂದು ನದ್ವಿ ಹೇಳಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj