ಇಸ್ರೇಲಿಗಿಂತ ಇಸ್ರೇಲ್ ಹೊರಗಿನ ರಾಷ್ಟ್ರಗಳಲ್ಲೇ ಹೆಚ್ಚು ಸುರಕ್ಷಿತವಾಗಿದೆ: ಸರ್ವೇಯಲ್ಲಿ ಬಹಿರಂಗ
ಇಸ್ರೇಲಿಗಿಂತ ಇಸ್ರೇಲ್ ಹೊರಗಿನ ರಾಷ್ಟ್ರಗಳಲ್ಲೇ ಹೆಚ್ಚು ಸುರಕ್ಷಿತತೆ ಮತ್ತು ನೆಮ್ಮದಿ ಇದೆ ಎಂದು ಪ್ರವಾಸಿಗಳ ಪೈಕಿ 60% ಮಂದಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಸರ್ವೇ ತಿಳಿಸಿದೆ. ವಿದೇಶೀಯದಲ್ಲಿರುವ ಇಸ್ರೇಲಿಗರಲ್ಲಿ ವರ್ಲ್ಡ್ ಝಿಯೋನಿಸ್ಟ್ ಓರ್ಗನೈಝೆಷನ್ ಅಕ್ಟೋಬರ್ ನಲ್ಲಿ ನಡೆಸಿದ ಸರ್ವೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
20 ಶೇಕಡಾ ಮಂದಿ ಇಸ್ರೇಲ್ ಗೆ ಮರಳಲು ಇಚ್ಚಿಸುತ್ತಿಲ್ಲ ಅನ್ನುವುದು ಕೂಡ ಸರ್ವೆಯಿಂದ ಬೆಳಕಿಗೆ ಬಂದಿದೆ. ಮಾತ್ರ ಅಲ್ಲ ಇಸ್ರೇಲಿನಲ್ಲಿರುವ ಮಂದಿಯಲ್ಲಿ ಶೇಕಡಾ 20 ಮಂದಿ ಮಾತ್ರ ಸಕಾರಾತ್ಮಕ ಅಭಿಪ್ರಾಯವನ್ನು ಹೊಂದಿದ್ದಾರೆ ಎಂದು ಈ ಸರ್ವೆಯಲ್ಲಿ ಭಾಗವಹಿಸಿದವರು ಹೇಳಿದ್ದಾರೆ. ತಮ್ಮ ಹತ್ತಿರದ ವ್ಯಕ್ತಿಗಳ ಹೊರತಾಗಿ ಇನ್ನಾರಲ್ಲೂ ತಾವು ಇಸ್ರೇಲಿಗರು ಎಂದು ಗುರುತಿಸಿಕೊಳ್ಳುವುದು ಅಪಾಯಕಾರಿ ಎಂಬ ಅಭಿಪ್ರಾಯ ಹೆಚ್ಚಿನವರದ್ದಾಗಿದೆ.
ಇದೇ ವೇಳೆ ಈ ಸರ್ವೆ ಫಲಿತಾಂಶದ ಮೇಲೆ ಪ್ರತಿಕ್ರಿಯಿಸಿರುವ ಇಸ್ರೇಲಿಗರು ಅಕ್ಟೋಬರ್ ಏಳರ ಬಳಿಕದ ಬೆಳವಣಿಗೆಯ ಬಗ್ಗೆ ಭಯ ಆತಂಕವನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇಸ್ರೇಲಿ ನಾಗರಿಕರಂತೆಯೇ ಇಸ್ರೇಲ್ ಹೊರಗಿನ ದೇಶಗಳಲ್ಲಿ ವಾಸಿಸುತ್ತಿರುವ ಯಹೂದಿಯರಿಗೂ ಭವಿಷ್ಯದ ಬಗ್ಗೆ ಆತಂಕವಾಗಿದೆ ಎಂದು ವರದಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj