ಭೋಪಾಲ್: ಸರ್ಕಾರಿ ಶಾಲೆಗಳಿಗೆ ದಿಢೀರ್ ಭೇಟಿ ನೀಡುವ ಸಚಿವರುಗಳು ಅಧಿಕಾರಿ ವರ್ಗಗಳಿಗೆ ಹಿಗ್ಗಾಮುಗ್ಗಾ ಬೈದು ಸುದ್ದಿಯಾಗುವುದು ಸಾಮಾನ್ಯವಾಗಿದೆ. ಆದರೆ, ಇಲ್ಲೊಬ್ಬರು ಸಚಿವರು ಶಾಲೆಯ ಶೌಚಾಲಯವನ್ನು ತಾನೇ ಸ್ವಚ್ಛ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಮಧ್ಯಪ್ರದೇಶದ ಇಂಧನ ಖಾತೆ ಸಚಿವರಾದ ಪ್ರದ್ಯುಮ್ನ ಸಿಂಗ್ ಥೋಮರ್ ಅವರು, ಇಲ್ಲಿನ ಹಜಿರ...