"ನೆನ್ನೆ ತಾನೇ Amazon prime ನಲ್ಲಿ ಬಿಡುಗಡೆಯಾದ “ರತ್ನನ್ ಪ್ರಪಂಚ” ಸಿನಿಮಾವನ್ನು ಕಂಡು ಹಾಸನದ ಯುವಕ ಸಚಿನ್ ಸರಗೂರು ಅಚ್ಚರಿ ವ್ಯಕ್ತಪಡಿಸಿದ್ದು, ಇದೊಂದು ಅತ್ಯದ್ಭುತವಾದ ಸಿನಿಮಾವಾಗಿದೆ ಎಂದು ಅಭಿಪ್ರಾಯ ವ್ಯಕಪಡಿಸಿದ್ದಾರೆ “ರತ್ನನ್ ಪ್ರಪಂಚ" ಬರೀ ರತ್ನಾಕರನಿಗೆ ಸೀಮಿತವಲ್ಲ. ನಮ್ಮೆಲ್ಲರ ಪ್ರಪಂಚ, ನಾವು ಒಮ್ಮೆ ನೆನಪಿಸಿಕೊಂಡು ತ...