ಜೊತೆ ಜೊತೆಯಲಿ ಧಾರಾವಾಹಿಯಿಂದ ಅನಿರುದ್ಧ್ ಔಟ್ ಆಗುತ್ತಿದ್ದಂತೆಯೇ ಇದೀಗ ಆರ್ಯವರ್ಧನ್ ಪಾತ್ರಕ್ಕೆ ನಟರ ಹುಡುಕಾಟ ಆರಂಭವಾಗಿದೆ. ನಟರ ಪಟ್ಟಿಯಲ್ಲಿ ಮೂರು ಹೆಸರು ಪ್ರಮುಖವಾಗಿ ಕೇಳಿ ಬಂದಿದೆ. ಖ್ಯಾತ ನಟ ವಿಜಯ ರಾಘವೇಂದ್ರ ಅವರು ಈ ಪಾತ್ರಕ್ಕೆ ಸೂಕ್ತವಾಗುತ್ತಾರೆ ಎಂದು ಸಾಕಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಝೀ ಕನ್ನಡದ ಜೊತೆಗ...