ಟಾಟಾ ಏಸ್ ವಾಹನ ಪಲ್ಟಿ: 20ಕ್ಕೂ ಹೆಚ್ಚು ಜನರಿಗೆ ಗಾಯ
ಚಾಮರಾಜನಗರ: ಟಾಟಾ ಏಸ್ ವಾಹನ ಪಲ್ಟಿಯಾಗಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶಿವಪುರ-ಹುಂಡಿಮನೆ ಮಾರ್ಗ ಮಧ್ಯೆ ನಡೆದಿದೆ.
ಭೀಮನ ಅಮಾವಾಸ್ಯೆ ಪ್ರಯುಕ್ತ ಟಾಟಾ ಏಸ್ ವಾಹನದಲ್ಲಿ ಮಹದೇಶ್ವರ ದೇವಸ್ಥಾನಕ್ಕೆ 20 ಕ್ಕೂ ಹೆಚ್ಚು ಮಂದಿ ಹೊರಟಿದ್ದರು. ಚಾಲಕನ ಅಜಾಗರೋಕತೆಯಿಂದ ವಾಹನ ಮಗುಚಿ ಬಿದ್ದಿದ್ದು, ಪರಿಣಾಮವಾಗಿ ವಾಹನದಲ್ಲಿದ್ದವರಿಗೆ ಕೈ ಕಾಲು ಮುರಿತ , ತಲೆಗೆ ಗಾಯವಾಗಿದೆ.
ಘಟನೆಯಲ್ಲಿ ಮಕ್ಕಳಿಗೂ ಪೆಟ್ಟು ಬಿದ್ದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಗೆ 15 ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರ ಮಾಡಲಾಗಿದೆ.


ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























