3:41 AM Wednesday 15 - October 2025

ಚಹಾ ಸೇವಿಸಿ ಇಬ್ಬರು ಸಾಧುಗಳು ಸಾವು | ಓರ್ವನ ಸ್ಥಿತಿ ಗಂಭೀರ!

22/11/2020

ಮಥುರಾ: ಸಾಧುಗಳ ಹತ್ಯೆಯ ಸುದ್ದಿ ಮಾಸುವ ಮೊದಲೇ ಇಬ್ಬರು ಸಾಧುಗಳು ಚಹಾ ಕುಡಿದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ.  ಒಟ್ಟು ಮೂವರು ಸಾಧುಗಳು ಚಹಾ ಸೇವಿಸಿದ್ದು, ಈ ಪೈಕಿ ಇಬ್ಬರು ಸಾಧುಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

 ಗುಲಾಬ್ ಸಿಂಗ್ ಮತ್ತು ಶ್ಯಾಮ್ ಸುಂದರ್ ಎಂಬ ಇಬ್ಬರು ಸಾಧುಗಳು ಸಾವಿಗೀಡಾಗಿದ್ದು, ಇನ್ನೋರ್ವ ಸಾಧು ರಾಮ್ ಬಾಬು ಎಂಬವರ ಆರೋಗ್ಯ  ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ  ದಾಖಲಿಸಲಾಗಿದೆ.

ತಾವು ತಂಗಿದ್ದ ಪ್ರದೇಶಕ್ಕೆ ಚಹಾ ತರಿಸಿಕೊಂಡು ಇವರು ಸೇವಿಸಿದ್ದರು. ಚಹಾದಲ್ಲಿ ವಿಷ ಬೆರೆಸಿದ್ದಾರೆ ಎಂಬ ಅನುಮಾನಗಳು ಸೃಷ್ಟಿಯಾಗಿವೆ. ಮೃತ ವ್ಯಕ್ತಿಗಳ ಮರಣೋತ್ತರ ಪರೀಕ್ಷೆಯನ್ನು ವೈದ್ಯರ ತಂಡವು ನಡೆಸುತ್ತಿದೆ. ಮೃತಪಟ್ಟ ಗುಲಾಬ್ ಸಿಂಗ್ ಕೋಸಿ ಕಲನ್ ಪೊಲೀಸ್ ಠಾಣೆ ವ್ಯಾಪ್ತಿಯ ದಲೌತಾ ಗ್ರಾಮದವರಾಗಿದ್ದು, ಶ್ಯಾಮ್ ಸುಂದರ್ ಮತ್ತು ರಾಮ್ ಬಾಬು ಅವರು ಗೋವರ್ಧನ್ ಪೊಲೀಸ್ ಠಾಣೆ ವ್ಯಾಪ್ತಿಯ ಪೈಂತಾ ಗ್ರಾಮದ ನಿವಾಸಿಗಳು.

ಆಶ್ರಮದೊಳಗೆ ಸಾಧುಗಳಿಗೆ ವಿಷ ನೀಡಲಾಗಿದೆ ಎಂದು ಮೃತ ಗೋಪಾಲ್‌ ಅವರ ಸೋದರರು ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version