13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಅರೆಸ್ಟ್!
11/11/2023
ಮಂಗಳೂರು: ಸುಮಾರು 13 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರಲ್ಲಿ ಬಂಧಿಸಲಾಗಿದೆ.
ಮಂಗಳೂರು ನಗರ ಕಮಿಷನರೇಟ್ ವ್ಯಾಪ್ತಿಯ ಉತ್ತರ ಪೊಲೀಸ್ ಠಾಣಾ ಅಕ್ರ ನಂ.26/2010 U/S 174 (ಎ) IPC ಪ್ರಕರಣದಲ್ಲಿ ಬಾಗಿಯಾದ ಆರೋಪಿ ಮೊಹಮ್ಮದ್ ಹನೀಪ್ @ಗುಜರಿ ಹನೀಫ್ ಎಂಬುವವರು ಸುಮಾರು 13 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಹಾಗೂ ಪೊಲೀಸರಿಗೆ ಸಿಗದೆ ತಲೆಮರೆಸಿಕೊಂಡು ಓಡಾಡುತ್ತಿದ್ದ.
ಈ ಪ್ರಕರಣವನ್ನು ನ್ಯಾಯಾಲಯವು LPC ಪ್ರಕರಣವೆಂದು ಪರಿಗಣಿಸಿರುತ್ತದೆ. LPC ವಾರಂಟ್ ಆಸಾಮಿಯನ್ನು ಬಂಧಿಸುವಲ್ಲಿ ಕೇಂದ್ರ ವಿಭಾಗ ಎಸಿಪಿ ಮಹೇಶ್ ಕುಮಾರ್ ರವರ ನಿರ್ದೇಶನದಂತೆ ಉತ್ತರ ಪೋಲಿಸ್ ಠಾಣೆಯ ನಿರೀಕ್ಷಕರಾದ ಅಜ್ಮತ್ ಅಲಿ ರವರ ಮಾರ್ಗದರ್ಶನದಂತೆ ಠಾಣಾ ಪಿಎಸ್ಐ ವಿನಾಯಕ ತೋರಗಲ್ ಮತ್ತು ಸಿಬ್ದಂದಿಗಳಾದ ಹೆಚ್ ಸಿ 887 ನೇ ಚಂದ್ರಹಾಸ್ ಸನೀಲ್ ಹಾಗೂ ಪಿಸಿ ಆನಂದ್ ರವರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪತ್ತೆ ಕಾರ್ಯವನ್ನು ಪೊಲೀಸ್ ಆಯುಕ್ತರು ಪ್ರಶಂಸಿದ್ದಾರೆ.

























