Titanic: ಟೈಟಾನಿಕ್ ಹಡಗು ನೋಡಲು ಹೋದವರ ದುರಂತ ಸಾವು: ಸಬ್ ಮೇರಿನ್ ಸ್ಫೋಟಗೊಂಡಿದ್ದು ಹೇಗೆ?

titanic sub crew
23/06/2023

ವಾಷಿಂಗ್ಟನ್: ಶತಮಾನಗಳಷ್ಟು ಹಳೆಯದಾದ ಟೈಟಾನಿಕ್ ಹಡಗಿನ ಅವಶೇಷಗಳನ್ನು ವೀಕ್ಷಿಸಲು ತೆರಳಿದ್ದ ಸಬ್ ಮೇರಿನ್  ಆಳ ಸಮುದ್ರದಲ್ಲಿ ಸ್ಟೋಟಗೊಂಡು ಸಬ್ ಮೇರಿನ್ ಪರಿಣತ ಸೇರಿದಂತೆ ಐವರು ಶ್ರೀಮಂತ ಪ್ರವಾಸಿಗರು ದುರಂತ ಸಾವಿಗೀಡಾಗಿದ್ದಾರೆ.

ಟೈಟಾನಿಕ್ ಹಡಗು ನೋಡಲು ತೆರಳಿದ್ದ ಸಬ್ ಮೇರಿನ್ ನಾಪತ್ತೆಯಾದ ಬಳಿಕ ಅದರ ಅವಶೇಷಗಳು ಲಭ್ಯವಾಗಿದ್ದು,  ಅದರಲ್ಲಿದ್ದ ಐವರು ಕೂಡ ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಕರಾವಳಿ ಕಾವಲು ವಿಭಾಗ ಗುರುವಾರ ತಿಳಿಸಿದೆ.

ಟೈಟಾನಿಕ್ ಹಡಗು ಇರುವ ಪ್ರದೇಶದಿಂದ ಸುಮಾರು 1600 ಅಡಿ ದೂರದಲ್ಲಿ ಸಮುದ್ರ ಮೇಲ್ಭಾಗದಿಂದ ಸುಮಾರು 4 ಕಿ.ಮೀ. ಆಳದಲ್ಲಿ ಸಬ್ ಮೇರಿನ್ ನ ಅವಶೇಷಗಳು ಪತ್ತೆಯಾಗಿವೆ.

ಅಮೆರಿಕ ಮೂಲದ ಓಷನ್ ಗೇಟ್ ಎಕ್ಸ್ ಪೆಂಡಿಷನ್ಸ್ ಎಂಬ ಕಂಪೆನಿಯು ಟೈಟಾನ್ ಹೆಸರಿನ ಸಬ್ ಮೇರಿನ್ ನಿರ್ವಹಣೆ ನಡೆಸುತ್ತಿತ್ತು. ಇದೊಂದು ದುಬಾರಿ ಪ್ರವಾಸವಾಗಿದ್ದು, ಅಪಾಯಕಾರಿ ಆಳದಲ್ಲಿರುವ ಟೈಟಾನಿಕ್ ಹಡಗನ್ನು ವೀಕ್ಷಿಸಲು ಬ್ರಿಟಿಷ್ ಬಿಲಿಯನೇರ್ ಮತ್ತು ಲೆಕ್ಕ ಪರಿಶೋಧಕ ಹಮೀಶ್ ಹಾರ್ಡಿಂಗ್(58) ಬ್ರಿಟೀಷ್ ಪ್ರಜೆಗಳಾಗಿರುವ ಪಾಕಿಸ್ತಾನ ಸಂಜಾತ ಉದ್ಯಮಿ ಶಹಜಾದ ದಾವೂದ್(48) ಮತ್ತು ಅವರ 19 ವರ್ಷದ ಮಗ ಸುಲೆಮಾನ್ ದಾವುದ್ ಮತ್ತು ಖ್ಯಾತ ಟೈಟಾನಿಕ್ ಪರಿಣತ ಪೌಲ್ ಹೆನ್ರಿ ನಾರ್ಗೆಯೋಲೆಟ್(77) ಮೃತಪಟ್ಟವರಾಗಿದ್ದಾರೆ.

ಆಳ ಸಮುದ್ರದಲ್ಲಿ ಉಂಟಾದ ನೀರಿನ ಒತ್ತಡದಿಂದ ಸಬ್ ಮೇರಿನ್ ಸ್ಫೋಟಗೊಂಡಿದೆ ಎಂದು ಹೇಳಲಾಗಿದೆ. ಇನ್ನೂ ಅಪಘಾತದಲ್ಲಿ ಸಾವನ್ನಪ್ಪಿದವರ ಮೃತದೇಹವನ್ನು ಪತ್ತೆ ಮಾಡುವುದು ಸಾಧ್ಯವೇ ಎನ್ನುವ ಬಗ್ಗೆ ಇದೀಗ ತನಿಖೆ ನಡೆಯುತ್ತಿದೆ.

ಸಮುದ್ರದ ತಳ ಭಾಗದಲ್ಲಿ ನುಗ್ಗುವ ನೀರಿನ ಒತ್ತಡದ ಜೊತೆಗೆ ಜಲಾಂತರ್ಗಾಮಿ ನೌಕೆಯ ಅಸಾಧ್ಯ ಬಲ ಹಾಗೂ ವೇಗ ಒಟ್ಟಾದ ಪರಿಣಾಮ ಸಬ್ ಮೇರಿನ್ ಒಳಗೆ ತೀವ್ರವಾದ ಒತ್ತಡ ಸೃಷ್ಟಿಯಾಗಿದೆ. ಈ ಒತ್ತಡವೇ ಸಬ್ ಮೇರಿನ್ ಸ್ಫೋಟಕ್ಕೆ ಕಾರಣವಾಗಿದೆ ಎಂದು  ಅಂದಾಜಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version