ಟೋಬಿ ಚೆನ್ನಾಗಿಲ್ಲ ಅಂದಿದ್ದಕ್ಕೆ ಯುವತಿ ವಿರುದ್ಧ ರೊಚ್ಚಿಗೆದ್ದ ದುಷ್ಕರ್ಮಿ: ಥಿಯೇಟರ್ ಎದುರೇ ಅವಾಚ್ಯ ಶಬ್ದ ಬಳಸಿ ಭಾಷೆ ಬಳಸಿ ನಿಂದನೆ

tobi
26/08/2023

ಮೈಸೂರು: ಟೋಬಿ ಚಿತ್ರ ಬಿಡುಗಡೆಯಾಗಿ ಅದ್ಬುತ ಯಶಸ್ಸು ಕಾಣುತ್ತಿದೆ. ಇದೇ ಸಂದರ್ಭದಲ್ಲಿ ಮೈಸೂರಿನ ಸಂಗಮ್ ಚಿತ್ರಮಂದಿರದ ಮುಂಭಾಗದಲ್ಲಿ ಯೂಟ್ಯೂಬ್ ಚಾನೆಲ್ ವೊಂದಕ್ಕೆ ಚಿತ್ರದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿದ್ದ ಯುವತಿಯೋರ್ವಳಿಗೆ ಅವಾಚ್ಯ ಶಬ್ದದಿಂದ ವ್ಯಕ್ತಿಯೋರ್ವ ನಿಂದಿಸಿರುವ ಘಟನೆ ನಡೆದಿದೆ.

ಸಿನಿಮಾ ನೋಡಿದ ಬಳಿಕ ಚಿತ್ರದ ಬಗ್ಗೆ ರಿವ್ಯೂ ನೀಡಿದ್ದ ಯುವತಿ ಚಿತ್ರ ಚೆನ್ನಾಗಿಲ್ಲ ಎಂದಿದ್ದಾರೆ. ಆದ್ರೆ, ಇದೇ ವೇಳೆ ವ್ಯಕ್ತಿಯೋರ್ವ ಏನ್ ಚೆನ್ನಾಗಿಲ್ಲ ಎಂದು ಪ್ರಶ್ನಿಸಿ ಅವಾಜ್ ಹಾಕಿದ್ದು, ನೀನು ಕನ್ನಡವರಿಗೆ ಹುಟ್ಟಿದ್ಯಾ? ಊರ್ ಜನಕ್ಕೆ ಹುಟ್ಟಿದ್ಯಾ? ಎಂದು ಅಸಭ್ಯ ಭಾಷೆ ಪ್ರಯೋಗಿಸಿದ್ದಾನೆ.

ದುಷ್ಕರ್ಮಿಯ ಅವಾಜ್ ಗೆ ಆಘಾತಕ್ಕೊಳಗಾಗಿ ಯುವತಿ ಮೌನವಾಗಿ ನಿಂತಿದ್ದರೆ, ದುಷ್ಕರ್ಮಿ ಅವಾಜ್ ಹಾಕ್ತನೇ ಇದ್ದ, ಚಪ್ಲಿ ತೆಗೆದು ಹೊಡಿಬೇಕು ನಿಮ್ಗಳಿಗೆಲ್ಲ ಎಂದು ಬೆದರಿಕೆ ಹಾಕಲು ಆರಂಭಿಸಿದ್ದನಲ್ಲದೇ ಒಯ್ತಾ ಇರು ಆಚೆ… ಎಂದು ಬೆದರಿಕೆ ಹಾಕಿದ್ದಾನೆ.

ಥಿಯೇಟರ್ ಮುಂದೆ ಸಾಕಷ್ಟು ಜನ ಇದ್ರೂ, ಆ ವ್ಯಕ್ತಿಯನ್ನು ತಡೆಯಲು ಯಾರೂ ಮುಂದಾಗಲಿಲ್ಲ, ಪೊಲೀಸರನ್ನ ಕರೆಸ್ತ್ಯಾ ಕರೆಸು ಅಂತ ಆತ ಯುವತಿಗೆ ಅವಾಜ್ ಹಾಕ್ತಲೇ ಇದ್ದ.ಸಿನಿಮಾ ನೋಡುವ ಪ್ರತಿಯೊಬ್ಬರೂ ಹಣಕೊಟ್ಟು ನೋಡ್ತಾರೆ, ಕೆಲವರಿಗೆ ಕೆಲವು ಚಿತ್ರಗಳು ಇಷ್ಟವಾಗ್ತವೆ ಇನ್ನು ಕೆಲವರಿಗೆ ಚಿತ್ರ ಇಷ್ಟವಾಗದೇ ಇರಬಹುದು, ಹಾಗಂತ ಅಭಿಪ್ರಾಯ ಹೇಳೋದು ತಪ್ಪು ಅದು ಅಪರಾಧ ಎಂಬಂತೆ ವರ್ತಿಸೋದು ಎಷ್ಟು ಸರಿ? ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.

ಪೊಲೀಸರ ಭಯವೇ ಇಲ್ಲ ಎಂಬಂತೆ ವ್ಯಕ್ತಿ ವರ್ತಿಸಿದ್ದು, ತಾನೇ ದೊಡ್ಡ ಹೀರೋ ಎಂಬಂತೆ ಪೋಸು ನೀಡಿರೋದು ಕಂಡು ಬಂತು. ಒಂದು ಹಂತದಲ್ಲಿ ಇನ್ನೇನು ಆ ದುಷ್ಕರ್ಮಿ ಯುವತಿಗೆ ಹಲ್ಲೆ ಮಾಡಿಯೇ ಬಿಡ್ತಾನಾ ಅನ್ನೊವಂತಹ ವಾತಾವರಣ ಸೃಷ್ಟಿಯಾಗಿತ್ತು.

ಇತ್ತೀಚಿನ ಸುದ್ದಿ

Exit mobile version