ಗಾಝಾದಲ್ಲಿ ಹಮಾಸ್ ಕಮಾಂಡರ್ ಹತ್ಯೆ: ಇಸ್ರೇಲ್ ರಕ್ಷಣಾ ಪಡೆ ಘೋಷಣೆ

19/10/2023

ಗಾಝಾದಲ್ಲಿ ಹಮಾಸ್ ನ ಉನ್ನತ ಕಮಾಂಡರ್ ಹತ್ಯೆಯಾಗಿರುವುದನ್ನು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ದೃಢಪಡಿಸಿದೆ. ಗಾಝಾದಲ್ಲಿ ಇಬ್ಬರು ಉನ್ನತ ಮಟ್ಟದ ಹಮಾಸ್ ಕಮಾಂಡರ್ ಗಳನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ತಿಳಿಸಿವೆ.

ಶಿನ್ ಬೆಟ್ ಭದ್ರತಾ ಸಂಸ್ಥೆ ಮತ್ತು ಮಿಲಿಟರಿ ಗುಪ್ತಚರ ನಿರ್ದೇಶನಾಲಯ ನಡೆಸಿದ ಗುಪ್ತಚರ ಕಾರ್ಯಾಚರಣೆ ನಂತರ ಹಮಾಸ್‌ನ ಗಾಝಾ ಸಿಟಿ ಬ್ರಿಗೇಡ್ ನ ಟ್ಯಾಂಕ್ ವಿರೋಧಿ ಮಾರ್ಗದರ್ಶಿ ಕ್ಷಿಪಣಿ ಶ್ರೇಣಿಯ ಮುಖ್ಯಸ್ಥ ಮುಹಮ್ಮದ್ ಅವದಲ್ಲಾ ಮತ್ತು ಹಮಾಸ್ ನೌಕಾ ಪಡೆಗಳ ಕಮಾಂಡರ್ ಅಕ್ರಮ್ ಹಿಜಾಜಿ ಅವರನ್ನು ಕೊಲ್ಲಲಾಗಿದೆ ಎಂದು ಸೇನೆ ತಿಳಿಸಿದೆ.

ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಮಾರಣಾಂತಿಕ ದಾಳಿಯ ನಂತರ ಅಕ್ಟೋಬರ್ 7 ರಂದು ಪ್ರಾರಂಭವಾದ ಯುದ್ಧವು ಇಲ್ಲಿಯವರೆಗೆ ಎರಡೂ ಕಡೆ 4000 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ.

ಇತ್ತೀಚಿನ ಸುದ್ದಿ

Exit mobile version