11:26 AM Friday 11 - September 2026

ವಿದ್ಯಾರ್ಥಿನಿಯೊಂದಿಗೆ ರೊಮಾನ್ಸ್​ ಪ್ರಕರಣ: ಸೇವೆಯಿಂದ ಮುಖ್ಯಶಿಕ್ಷಕ ವಜಾ

posko
29/01/2022

ಮೈಸೂರು: ಇತ್ತೀಚೆಗೆ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾರ್ಥಿನಿಯೊಂದಿಗೆ ಮುಖ್ಯಶಿಕ್ಷಕ ರೊಮ್ಯಾನ್ಸ್ ಮಾಡುತ್ತಿರುವ ದೃಶ್ಯ ವೈರಲ್​ ಆಗಿತ್ತು. ಮುಖ್ಯಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಗಳು ಕೇಳಿಬಂದ ಬೆನ್ನಲ್ಲೇ ಮುಖ್ಯಶಿಕ್ಷಕನನ್ನು ಸೇವೆಯಿಂದಲೇ ವಜಾಗೊಳಿಸಲಾಗಿದೆ.

ಮುಖ್ಯಶಿಕ್ಷಕ ಆರ್.ಎಂ.ಅನಿಲ್ ಕುಮಾರ್ ಎಂಬವರನ್ನು ಸೇವೆಯಿಂದಲೇ ಖಾಯಂ ವಜಾಗೊಳಿಸಲು ಖಾಸಗಿ ಶಾಲಾ ಆಡಳಿತ ಮಂಡಳಿಯ ತುರ್ತು ಸಭೆಯಲ್ಲಿ ತೀರ್ಮಾನ‌ ತೆಗೆದುಕೊಳ್ಳಲಾಗಿದ್ದು, ಈಗಾಗಲೇ ಮುಖ್ಯಶಿಕ್ಷಕನ ವಿರುದ್ಧ ಹೆಚ್.ಡಿ. ಕೋಟೆ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ಸಹ ದಾಖಲಾಗಿದೆ.

ಎಚ್.ಡಿ.ಕೋಟೆ ತಾಲೂಕಿನ ಶಾಲೆಯೊಂದರ ಕೊಠಡಿಯೊಳಗೆ ವಿದ್ಯಾರ್ಥಿನಿಯನ್ನ ತಬ್ಬಿಕೊಂಡು ಮುದ್ದಾಡುತ್ತಿದ್ದ ದೃಶ್ಯವನ್ನು ಹೊರಗಿನಿಂದ ಕಿಟಕಿ ಬಳಿ ನಿಂತು ಕೆಲ ವಿದ್ಯಾರ್ಥಿಗಳು ವಿಡಿಯೋ ಮಾಡಿದ್ದರು. ಕಿಟಕಿ ಬಳಿ ವಿಡಿಯೋ ಮಾಡುತ್ತಿರುವುದನ್ನ ನೋಡಿದ ಕೂಡಲೇ ವಿದ್ಯಾರ್ಥಿನಿಯನ್ನ ಬಿಟ್ಟು ಮುಖ್ಯಶಿಕ್ಷಕ ಸುಮ್ಮನೆ ನಿಲ್ಲುವುದು ಮತ್ತು ವಿದ್ಯಾರ್ಥಿನಿ ಕೊಠಡಿಯಿಂದ ಹೊರ ಹೋಗುವ ದೃಶ್ಯ ವೈರಲ್​ ವಿಡಿಯೋದಲ್ಲಿ ಸೆರೆಯಾಗಿತ್ತು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಶಿಕ್ಷಣ ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸ್ಫೋಟ: ನಾಲ್ವರು ಸಾವು, 10 ಮಂದಿಗೆ ಗಾಯ

ನಟಿ ಮೇಲೆ ಅತ್ಯಾಚಾರ ಆರೋಪ: ಸ್ಯಾಂಡಲ್ ವುಡ್ ನಟ, ನಿರ್ಮಾಪಕ ಬಂಧನ

ಐ ಪಿ ಎಸ್​ ಅಧಿಕಾರಿ ರವಿ ಡಿ. ಚನ್ನಣ್ಣನವರ್ ವರ್ಗಾವಣೆ ಆದೇಶ ತಡೆಹಿಡಿದ ಸರ್ಕಾರ

ಬಿಜೆಪಿ ಕಾರ್ಯಕರ್ತರು ಕರಪತ್ರ ಹಂಚುವ ಮೂಲಕ ಕೋವಿಡ್ ಹರಡುತ್ತಿದ್ದಾರೆ: ಅಖಿಲೇಶ್ ಯಾದವ್ ಆರೋಪ

ಗಾಂಧಿಧಾಮ್-ಪುರಿ ಎಕ್ಸ್ ​ಪ್ರೆಸ್ ರೈಲ್‌ ನಲ್ಲಿ ಬೆಂಕಿ

 

ಇತ್ತೀಚಿನ ಸುದ್ದಿ

mobil chat sitesi Ucuz Uçak Bileti
Exit mobile version