4:46 AM Wednesday 19 - November 2025

ಮಣಿಪುರದಲ್ಲಿ ಮತ್ತೊಂದು ಕ್ರೌರ್ಯ ತುಂಬಿದ ವೀಡಿಯೋ ವೈರಲ್: ಯುವಕನ ಸಜೀವ ದಹನ

11/10/2023

ಮಣಿಪುರದಲ್ಲಿ ನಡೆದ ಜನಾಂಗೀಯ ಸಂಘರ್ಷದ ನಂತರ ನಡೆದಂತಹ ಹಿಂಸಾಚಾರದ ಒಂದೊಂದು ಘಟನೆಗಳು ಬೆಚ್ಚಿಬೀಳಿಸುವಂತಿದೆ. ಮಹಿಳೆಯರ ನಗ್ನ ಮೆರವಣಿಗೆ ವೀಡಿಯೋ ಬಹಿರಂಗಗೊಂಡ ಬಳಿಕ ಮತ್ತೊಂದು ಕ್ರೌರ್ಯ ತುಂಬಿದ ವಿಡಿಯೋ ವೈರಲ್‌ ಆಗಿದೆ.

ಹೌದು. ಮಣಿಪುರದಲ್ಲಿ ಮತ್ತೊಂದು ಭಯಾನಕ ವೀಡಿಯೋ ವೈರಲ್ ಆಗಿದೆ. ವೈರಲ್‌ ಆದ 7 ಸೆಕೆಂಡ್‌ ನ‌ ಈ ವಿಡಿಯೋದಲ್ಲಿ ಯುವಕನನ್ನು ಕಟ್ಟಿ ಹಾಕಿ ಬೆಂಕಿ ಹಚ್ಚಿ ಸಜೀವವಾಗಿ ದಹಿಸಲಾಗಿದೆ. ಜೊತೆಗೆ ಕೆಲವು ಮಂದಿ ನಿಂತಿರುವುದು ಮಾತನಾಡುತ್ತಿರುವುದು, ಹಾಗೇ ಗುಂಡಿನ ಶಬ್ದ ಕೂಡ ಕೇಳಿ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಹತ್ಯೆಯಾದ ಯುವಕನನ್ನು ಕುಕಿ ಸಮುದಾಯದ ಕಂಗ್ಪೋಕಿ ಜಿಲ್ಲೆಯ 35 ವರ್ಷದ ಲಾಲ್‌ಡೆಂಟ್‌ತಾಂಗ್‌ ಖೊಂಗ್‌ಸೈ ಎಂದು ಗುರುತಿಸಲಾಗಿದೆ.

ವಿಡಿಯೋ ಬಗ್ಗೆ ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ರಾಜ್ಯ ಭದ್ರತಾ ಸಲಹೆಗಾರ ಕುಲದೀಪ್‌ ಸಿಂಗ್‌, ಘಟನೆಯನ್ನು ಖಚಿತಪಡಿಸಿದ್ದಾರೆ. ಈ ಘಟನೆ ಮೇ ತಿಂಗಳಿನಲ್ಲಿ ನಡೆದ ಹಿಂಸಾಚಾರದ ಸಮಯದಲ್ಲೇ ನಡೆದಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.

ನೊಂಗ್ಪೋಕ್‌ ಸೆಕ್ಮೈ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು ಈ ಕುರಿತು ಎಫ್‌ಐಆರ್‌ ಕೂಡ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣವನ್ನು ಸಿಬಿಐಗೆ ವಹಿಸಲಾಗಿದ್ದು
ಹತ್ಯೆಯಾದ ಯುವಕನ ಮೃತದೇಹವನ್ನು ಇಂಫಾಲದ ಜವಾಹರಲಾಲ್‌ ನೆಹರೂ ಇನ್ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಶವಾಗಾರದಲ್ಲಿ ಇರಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version