12:45 AM Saturday 23 - August 2025

ಸ್ನಾನ ಮಾಡುತ್ತಿದ್ದ ಯುವತಿಯ ವಿಡಿಯೋ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ ಕಾಮುಕರು: ಮರ್ಯಾದೆಗೆ ಅಂಜಿ ಪ್ರಾಣ ಬಿಟ್ಟ ಯುವತಿ!

crime news
17/10/2023

ಉತ್ತರ ಪ್ರದೇಶ: ಯುವತಿ ಸ್ನಾನ ಮಾಡುತ್ತಿದ್ದ ವೇಳೆ ಅಡಗಿ ಕುಳಿತು ವಿಡಿಯೋ ಮಾಡಿದ ಇಬ್ಬರು ಕಾಮುಕರು, ಬಳಿಕ ತಮ್ಮೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕು, ಇಲ್ಲವಾದ್ರೆ ವಿಡಿಯೋ ವೈರಲ್ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದು, ಕಾಮುಕರ ಉಪಟಳ ತಾಳಲಾರದೇ ಯುವತಿ  ಆತ್ಮಹತ್ಯೆ ಮಾಡಿಕೊಂಡ ಘಟನೆ  ಉತ್ತರ ಪ್ರದೇಶದಲ್ಲಿ ನಡೆದಿದೆ.

ಅಭಿಷೇಕ್(23) ಮತ್ತು ವಿಷ್ಣು(21) ಯುವತಿಯ ಸ್ನಾನದ ವಿಡಿಯೋ ಮಾಡಿ ಕಿರುಕುಳ ನೀಡಿದ ಆರೋಪಿಗಳಾಗಿದ್ದು, ಯುವತಿ ಬರೆದಿದ್ದಾಳೆ ಎನ್ನಲಾಗಿರುವ ಡೆತ್ ನೋಟ್ ನಲ್ಲಿ ಈ ಇಬ್ಬರ ಹೆಸರು ಹಾಗೂ ಕೃತ್ಯವನ್ನು ವಿವರಿಸಲಾಗಿದೆ.

19 ವರ್ಷದ ಯುವತಿ ಸಾವಿಗೀಡಾದ ಯುವತಿಯಾಗಿದ್ದಾಳೆ. ತನ್ನ ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ  ಕಾಮುಕರು ಅಡಗಿ ಕುಳಿತು ವಿಡಿಯೋ ಮಾಡಿದ್ದು, ಬಳಿಕ ಲೈಂಗಿಕತೆಗೆ ಸಹಕರಿಸುವಂತೆ ಒತ್ತಾಯಿಸಿದ್ದಾರೆ. ಯುವತಿ ನಿರಾಕರಿಸಿದಾಗ ವಿಡಿಯೋ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ. ಮರ್ಯಾದೆಗೆ ಅಂಜಿದ ಸಂತ್ರಸ್ತೆ ಆತ್ಮಹತ್ಯೆಗೆ ಶರಣಾಗಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತೆಯ ತಂದೆ ಉತ್ತರ ಪ್ರದೇಶ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.  ಆರೋಪಿಗಳು ತಲೆಮರೆದಿಕೊಂಡಿದ್ದು, ಅವರ ಪತ್ತೆಗಾಗಿ ಶೋಧ ನಡೆಸುತ್ತಿರೋದಾಗಿ ಖೈರಗಢ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಮಹೇಶ್ ಕುಮಾರ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version