ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಒಂಟಿ ಸ್ಪರ್ಧೆ.? ಉದ್ದವ್ ಠಾಕ್ರೆ ಪ್ಲ್ಯಾನ್ ಏನು..?

ವಿಧಾನಸಭಾ ಚುನಾವಣೆಯನ್ನು ಒಂಟಿಯಾಗಿ ಎದುರಿಸಲಿದ್ದಾರೆ ಎಂಬ ಊಹಾಪೋಹದ ನಡುವೆಯೇ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ದವ್ ಠಾಕ್ರೆ ಅವರು ಮಹಾ ವಿಕಾಸ ಅಗಾಡಿ ನಾಯಕರ ಜೊತೆ ಸುದ್ದಿಗೋಷ್ಠಿ ನಡೆಸಿದ್ದಾರೆ. ಮಾತ್ರವಲ್ಲ, ಮುಂದಿನ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಮತ್ತು ಎನ್ ಸಿ ಪಿ ಜೊತೆಯಾಗಿ ಎದುರಿಸುವ ಸುಳಿವು ನೀಡಿದ್ದಾರೆ. ಹಾಗೆಯೇ ಇದು ಆರಂಭವಾಗಿದೆ ಮತ್ತು ಇದು ಕೊನೆಗೊಳ್ಳುವುದಿಲ್ಲ ಎಂದು ಕೂಡ ಬಿಜೆಪಿ ಮತ್ತು ಶಿಂಧೆ ಬಳಗಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪ್ರಜಾತಂತ್ರ ಮತ್ತು ಸಂವಿಧಾನವನ್ನು ಉಳಿಸುವ ಹೋರಾಟ ನಮ್ಮದಾಗಿತ್ತು. ವಿಧಾನಸಭಾ ಚುನಾವಣೆ ಇನ್ನೇನು ಹತ್ತಿರದಲ್ಲಿದೆ. ಮಹಾವಿಕಾಸ್ ಅಗಾಡಿಯ ಈ ಲೋಕಸಭಾ ಗೆಲುವು ಕೊನೆಯದಲ್ಲ ಇದು ಆರಂಭ ಎಂದು ಉದ್ದವ್ ಠಾಕರೆ ಹೇಳಿದ್ದಾರೆ.
ಈವರೆಗೆ ಮೋದಿ ಸರ್ಕಾರವಿತ್ತು. ಈಗ ಎನ್.ಡಿ.ಎ ಸರಕಾರ ಅಧಿಕಾರದಲ್ಲಿದೆ. ಎಷ್ಟು ಸಮಯ ಈ ಸರ್ಕಾರ ಅಧಿಕಾರದಲ್ಲಿರುತ್ತದೆ ಎಂದು ನೋಡೋಣ. ಮೋದಿ ಗ್ಯಾರಂಟಿ ಮತ್ತು ಅಚ್ಚೆ ದಿನ್ ಎಂಬ ಘೋಷಣೆ ಏನಾಯ್ತು? ನನ್ನ ಸರ್ಕಾರವನ್ನು ಮೂರು ಚಕ್ರದ ರಿಕ್ಷಾ ಎಂದು ಫಡ್ನವಿಸ್ ತಮಾಷೆ ಮಾಡಿದ್ದರು. ಇದೀಗ ಮೋದಿ ಸರ್ಕಾರ ಕೂಡ ಮೂರು ಚಕ್ರದ ರಿಕ್ಷಾವಾಗಿಯೇ ಬದಲಾಗಿದೆ ಎಂದವರು ವ್ಯಂಗ್ಯವಾಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth