ಹೇ….ಯಪ್ಪಾ…. ಮೊದ್ಲು ನೆಟ್ಟಗೆ ಮಾತಾಡು… ಹೇ… ನೀನು ನೆಟ್ಟಗೆ ಮಾತಾಡಮ್ಮ… | ಕಂಡಕ್ಟರ್ ಜೊತೆ ಜಗಳಕ್ಕೆ ನಿಂತ ಮಹಿಳಾ ಮಣಿಗಳು
ಚಿಕ್ಕಮಗಳೂರು: ಹೇ….ಯಪ್ಪಾ…. ಮೊದ್ಲು ನೆಟ್ಟಗೆ ಮಾತಾಡು… ಹೇ… ನೀನು ನೆಟ್ಟಗೆ ಮಾತಾಡಮ್ಮ… ಹೀಗೆ ಕಂಡೆಕ್ಟರ್ ಜೊತೆಗೆ ಮಹಿಳೆಯರು ಮಾತಿನ ಸಮರಕ್ಕಿಳಿದು, ಇನ್ನಷ್ಟು ಜನರನ್ನು ಬಸ್ ಗೆ ಹತ್ತಿಸಿಕೊಳ್ಳುವಂತೆ ದುಂಬಾಲು ಬಿದ್ದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಸ್ ನಿಲ್ದಾಣದಲ್ಲಿ ನಡೆದಿದೆ.
60 ಸೀಟಿನ ಸರ್ಕಾರಿ ಬಸ್ಸಲ್ಲಿ, 150 ಜನ…! ತುಂಬಿದರೂ, ಮತ್ತಷ್ಟು ಜನರು ಬಸ್ ಏರಲು ಕಾದು ನಿಂತಿದ್ದರು. ಕೊಟ್ಟಿಗೆಹಾರದಿಂದ ಹೊರನಾಡಿಗೆ ಹೊರಟಿದ್ದ ಸರ್ಕಾರಿ ಬಸ್ಸಿನಲ್ಲಿ ನಿಲ್ಲೋಕೂ ಜಾಗವಿಲ್ಲದಷ್ಟು ಜನರು ತುಂಬಿದ್ದರು.
ಕಂಡೆಕ್ಟರ್ ಗೇ ಬಸ್ ನಲ್ಲಿ ನಿಲ್ಲೋಕೆ ಜಾಗವಿಲ್ಲ, ಅಂತಹದರಲ್ಲಿ ಮಹಿಳೆಯರು ಇನ್ನಷ್ಟು ಜನರನ್ನ ಹತ್ತಿಸಿಕೊಳ್ಳುವಂತೆ ಮುಗಿಬಿದ್ದಿದ್ದಾರೆ. ಇನ್ನೊಂದೆಡೆ ಪುರುಷ ಪ್ರಯಾಣಿಕರ ಗೋಳು ಕೇಳುವವರು ಯಾರು ಅನ್ನೋವಂತ ಸ್ಥಿತಿ ನಿರ್ಮಾಣವಾಗಿದ್ದು, ಬಸ್ಸಿನ ಬಾಗಿಲಲ್ಲಿ ನೇತಾಡಿಕೊಂಡೇ ಪುರುಷರು ಪ್ರಯಾಣಿಸುವ ದುಸ್ಥಿತಿ ನಿರ್ಮಾಣವಾಗಿತ್ತು.
ಉತ್ತರ ಕರ್ನಾಟಕದಿಂದ ಧಾರ್ಮಿಕ ಕ್ಷೇತ್ರಕ್ಕೆ ಮಹಿಳೆಯರು ಪ್ರವಾಸಕ್ಕೆ ಬಂದಿದ್ದರು. ಹೀಗಾಗಿ ಬಸ್ಸ್ ತುಂಬಿ ತುಳುಕಿತ್ತು. ಬಸ್ಸಿನಲ್ಲಿ ನಿಲ್ಲೋಕು ಜಾಗ ಇಲ್ಲ, ಬೇರೆ ಬಸ್ ಬರುತ್ತೆ ಅದರಲ್ಲಿ ಬನ್ನಿ ಅಂದ ಕಂಡಕ್ಟರ್ ಜೊತೆಗೆ ಮಹಿಳೆಯರು ಜಗಳಕ್ಕೆ ನಿಂತಿದ್ದಾರೆ.

























