ಯಶ್ ಜಟಾಯುವನ್ನು ಕೊಂದಿದ್ದಕ್ಕೆ ಕಣ್ಣೀರಿಟ್ಟ ಪುತ್ರ ಯಥರ್ವ್!

yash
01/11/2026

ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಪ್ರೀಮಿಯರ್ ಶೋನಲ್ಲಿ (ಲಾಸ್ ಏಂಜಲೀಸ್) ಒಂದು ಅಪರೂಪದ ಹಾಗೂ ಭಾವುಕ ಸನ್ನಿವೇಶ ನಡೆದಿದೆ. ಈ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ಅಭಿನಯಿಸಿರುವ ನಟ ಯಶ್ ಅವರ ಮಗ ಯಥರ್ವ್, ತೆರೆಯ ಮೇಲೆ ತಂದೆ ಜಟಾಯು ಪಕ್ಷಿಯನ್ನು ಕೊಲ್ಲುವ ದೃಶ್ಯವನ್ನು ಕಂಡು ಭಾವುಕನಾಗಿ ಕಣ್ಣೀರಿಟ್ಟಿದ್ದಾನೆ.

ಇತ್ತೀಚೆಗೆ ನಡೆದ ಮಾಧ್ಯಮ ಸಂವಾದದಲ್ಲಿ ನಟಿ ಸಾಯಿ ಪಲ್ಲವಿ (ಚಿತ್ರದಲ್ಲಿ ಸೀತೆಯ ಪಾತ್ರದಾರಿ) ಈ ಮುಗ್ಧ ಘಟನೆಯನ್ನು ಹಂಚಿಕೊಂಡಿದ್ದಾರೆ.

ಚಿತ್ರಮಂದಿರದಲ್ಲಿ ಮೊದಲ ಬಾರಿಗೆ ಸಿನಿಮಾ ನೋಡುತ್ತಿದ್ದ ಯಶ್ ಅವರ ಮಕ್ಕಳಿಗೆ (ಆಯ್ರಾ ಮತ್ತು ಯಥರ್ವ್) ಹಲವು ಕುತೂಹಲಕಾರಿ ಪ್ರಶ್ನೆಗಳಿದ್ದವು. ರಾವಣನ ಪಾತ್ರದಲ್ಲಿದ್ದ ಯಶ್ ಜಟಾಯುವನ್ನು ಹತ್ಯೆ ಮಾಡುವ ದೃಶ್ಯ ಬಂದಾಗ, ಯಥರ್ವ್ ಗೆ ತಡೆದುಕೊಳ್ಳಲಾಗದೆ ಅಳಲು ಪ್ರಾರಂಭಿಸಿದ್ದಾನೆ.

ಬಳಿಕ ತಂದೆ ಯಶ್ ಬಳಿ, “ನನಗೆ ನೀವು ಆ ಪಕ್ಷಿಯನ್ನು ಕೊಂದಿದ್ದು ಇಷ್ಟವಾಗಲಿಲ್ಲ. ಅದು ಕೇವಲ ಸಿನಿಮಾ ಆಗಿದ್ದರೂ ಸಹ, ನೀವು ಆ ರೀತಿ ಮಾಡಬಾರದಿತ್ತು. ಅದು ಒಳ್ಳೆಯ ಕೆಲಸವಲ್ಲ” ಎಂದು ತಂದೆಯ ಮೇಲಿದ್ದ ಬೇಸರವನ್ನು ಮುಗ್ಧವಾಗಿ ತೋಡಿಕೊಂಡಿದ್ದಾನೆ.

ಈ ಕುರಿತು ಮಾತನಾಡಿದ ಯಶ್, “ಮಕ್ಕಳು ಇನ್ನು ಜೀವನವನ್ನು ಅರ್ಥೈಸಿಕೊಳ್ಳಲು ಪ್ರಾರಂಭಿಸುತ್ತಿದ್ದಾರೆ. ಯಾವುದು ಸರಿ, ಯಾವುದು ತಪ್ಪು ಎಂಬ ಗ್ರಹಿಕೆ ಅವರಿಗೆ ಈಗಷ್ಟೇ ಬರುತ್ತಿದೆ. ಮಗನ ಈ ಸತ್ಯವಾದ ಮತ್ತು ಮುಗ್ಧ ಪ್ರತಿಕ್ರಿಯೆ ನನಗೆ ಆಶ್ಚರ್ಯ ತಂದಿತು” ಎಂದಿದ್ದಾರೆ.

ಅಲ್ಲದೆ, ರಾವಣನ ಪಾತ್ರವನ್ನು ಕೇವಲ ಶಾರೀರಿಕ ಬಲ ತೋರಿಸುವ ಅಹಂಕಾರಿ ರಾಕ್ಷಸನಂತೆ ಚಿತ್ರಿಸದೆ, ಆತನಲ್ಲಿನ ಅಪಾರ ಜ್ಞಾನ, ಬುದ್ಧಿವಂತಿಕೆ ಮತ್ತು ಸಂಕೀರ್ಣತೆಯನ್ನು ಪ್ರೇಕ್ಷಕರಿಗೆ ತಲುಪಿಸಲು ಪ್ರಯತ್ನಿಸಿರುವುದಾಗಿ ಯಶ್ ತಿಳಿಸಿದ್ದಾರೆ.

ರಣಬೀರ್ ಕಪೂರ್ (ರಾಮ), ಸಾಯಿ ಪಲ್ಲವಿ (ಸೀತೆ), ಯಶ್ (ರಾವಣ), ಮತ್ತು ಸನ್ನಿ ಡಿಯೋಲ್ (ಹನುಮಂತ) ಮುಖ್ಯ ಭೂಮಿಕೆಯಲ್ಲಿದ್ದು, ಎ.ಆರ್.ರಹಮಾನ್ ಮತ್ತು ಹ್ಯಾನ್ಸ್ ಝಿಮ್ಮರ್ ಸಂಗೀತ ನೀಡುತ್ತಿರುವ ಈ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾ ನವೆಂಬರ್ 5ರಂದು ಪ್ರಪಂಚದಾದ್ಯಂತ ಬಿಡುಗಡೆಯಾಗಲಿದೆ.

ಇತ್ತೀಚಿನ ಸುದ್ದಿ

deneme bonusu veren siteler gamdom giriş deneme bonusu veren siteler
Exit mobile version