5:09 PM Thursday 23 - October 2025

ಸಿನಿಮಾ ನೋಡಲು ಅವಕಾಶ ಕೊಡಿ: ಸರ್ಕಾರದ ಹೆಸರಿನಲ್ಲಿ ತಂದೆಗೆ ಬೆದರಿಕೆ ಪತ್ರ ಬರೆದ ಮಗ..!

29/09/2023

‘ಐರನ್‌ ಮ್ಯಾನ್‌’ ಸಿನಿಮಾ ವೀಕ್ಷಿಸಲು ಅನುಮತಿ ನೀಡದೇ ಹೋದರೇ ನಿಮ್ಮ ಸಾವು ಖಚಿತ ಎಂದು ತಂದೆಗೆ ಸ್ವತಃ 8 ವರ್ಷದ  ಬಾಲಕನೊಬ್ಬ ಬರೆದ ಬೆದರಿಕೆ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಬಾಲಕ ತನ್ನ ಕೈಬರಹದಲ್ಲೇ ಬರೆದಿರುವ ಈ ಪತ್ರದಲ್ಲಿ ಮೊದಲಿಗೆ ಆತನ ತಂದೆಯ ಹೆಸರಿದೆ. ಆತ್ಮೀಯ ಜೋಯಲ್ ಬೆರ್ರಿ, ನಿಮ್ಮ ಮಕ್ಕಳಿಗಾಗಿ ನೀವು ಇಂದು ರಾತ್ರಿ ಐರನ್ ಮ್ಯಾನ್ ಅನ್ನು ವೀಕ್ಷಿಸಲು ಅವಕಾಶ ನೀಡಬೇಕು. ಅನುಮತಿ ನೀಡದೇ ಹೋದರೇ ನಿಮ್ಮ ಸಾವು ಖಚಿತ. ಅದರ ಕೆಳಗೆ From, government ಅಂತ ಬರೆದಿದ್ದಾನೆ. ಅಂದರೆ ಇದು ಸರ್ಕಾರವೇ ನಿಮಗೆ ಬರೆಯುತ್ತಿರುವ ಪತ್ರ ಇದನ್ನು ಕಡೆಗಣಿಸಬೇಡಿ. ಮಕ್ಕಳಿಗೆ ಸಿನಿಮಾ ನೋಡಲು ಅನುಮತಿ ನೀಡಬೇಕು ಎನ್ನುವುದು ಪತ್ರ ಬರೆದಿರುವುದರ ಉದ್ದೇಶವಾಗಿದೆ.

ಮಗ ಬರೆದ ಪತ್ರವನ್ನು ಬೆರ್ರಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟ್​​ 82 ಸಾವಿರಕ್ಕೂ ಹೆಚ್ಚಿನ ಲೈಕ್​​ ಪಡೆದುಕೊಂಡಿದೆ.
ದಿ ಬ್ಯಾಬಿಲೋನ್ ಬೀ ವ್ಯವಸ್ಥಾಪಕ ನಿರ್ದೇಶಕ ಜೋಯಲ್ ಬೆರ್ರಿ ಅವರು ಈ ಹೃದಯಸ್ಪರ್ಶಿ ಸಾಮಾಜಿಕ ಮಾಧ್ಯಮ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದು 2.7 ಮಿಲಿಯನ್ ವೀಕ್ಷಣೆಗಳನ್ನು ಕೂಡಾ ಗಳಿಸಿದೆ. ಟ್ವೀಟ್ ಹಾಸ್ಯಮಯ ಆಗಿದ್ರೂ ಸ್ವಲ್ಪ ಭಯಾನಕ ಸಂದೇಶವನ್ನು ಹೊಂದಿದೆ.

ಕವರ್ ಮೇಲ್ಬಾಗ ಈ ರೀತಿ ಬರೆಯಲಾಗಿತ್ತು. “ಜೋಯಲ್ ಬೆರ್ರಿ ತುರ್ತಾಗಿ ಈ ಮೇಲ್ ನೋಡಿ” ಎಂದು. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಕಮೆಂಟ್ ಗಳು ಕೂಡಾ ಬರುತ್ತಿದೆ.

ಇತ್ತೀಚಿನ ಸುದ್ದಿ

Exit mobile version