7:48 AM Saturday 7 - February 2026

ರನ್​ ವೇನಲ್ಲಿ ವಿಡಿಯೋ ಚಿತ್ರೀಕರಿಸಿದ ಯೂಟ್ಯೂಬರ್ ವಿಕಾಸ್ ಗೌಡ ಅರೆಸ್ಟ್

vikas gowda
17/04/2024

ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ  ರನ್​ ವೇನಲ್ಲಿ ವಿಡಿಯೋ ಚಿತ್ರೀಕರಿಸಿ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿದ್ದ ಯೂಟ್ಯೂಬರ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಮೂಲದ ವಿಕಾಸ್ ಗೌಡ ಬಂಧಿತ ಯೂಟ್ಯೂಬರ್ ಆಗಿದ್ದಾನೆ. ಟಿಕೆಟ್ ಇಲ್ಲದೆ ಒಳಗಡೆ ಬಂದಿದ್ದೇನೆ, 24 ಗಂಟೆ ರನ್ ವೇ ಬಳಿಯೇ ಇದ್ದೆ. ಎಲ್ಲ ಅಧಿಕಾರಿಗಳ, ಸಿಬ್ಬಂದಿ ಕಣ್ಣುತಪ್ಪಿಸಿ ವಿಮಾನ ನಿಲ್ದಾಣದ ಒಳಗೆ ಪ್ರವೇಶ ಮಾಡಿ, ವಿಡಿಯೋ ಮಾಡಿದ್ದೇನೆ ಎಂದು ವಿಕಾಸ್ ಗೌಡ ವಿಡಿಯೋದಲ್ಲಿ  ಹೇಳಿಕೊಂಡಿದ್ದ.  ಈ ವಿಡಿಯೋ ನೋಡಿದ  ಸಿಐಎಸ್ ಎಫ್ ಅಧಿಕಾರಿಗಳು ವಿಕಾಸಗೌಡ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಂತೆಯೇ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಠಾಣೆ ಪೊಲೀಸರು ವಿಕಾಸ್ ​ಗೌಡನನ್ನು ಬಂಧಿಸಿದೆ.

ಇನ್ನೂ ಪೊಲೀಸರ ವಿಚಾರಣೆ ವೇಳೆ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಪಡೆದಿದ್ದೇನೆ. ಆದರೆ ಪ್ರಯಾಣಿಸದೆ ರನ್ ​ವೇನಲ್ಲೆ ಉಳಿದುಕೊಂಡೆ. ಸುಮಾರು 4-5 ಗಂಟೆಗಳ ಕಾಲ ಅಲ್ಲಿಯೇ ಇದ್ದು, ವಿಡಿಯೋ ಮಾಡಿ ವಾಪಸ್ ಬಂದಿರುವುದಾಗಿ ವಿಕಾಸ್ ಗೌಡ ಹೇಳಿಕೆ ನೀಡಿದ್ದಾನೆ ಎಂದು ವರದಿಯಾಗಿದೆ. ಘಟನೆ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version