ಬಂತು ಕ್ಯಾನ್ಸರ್ ತಡೆಗಟ್ಟುವ ಮಾತ್ರೆ: ಟಾಟಾ ಸಂಸ್ಥೆಯಿಂದ ನೂರು ರೂಪಾಯಿಗೆ ಟ್ಯಾಬ್ಲೆಟ್..!

28/02/2024

ಒಮ್ಮೆ ಕ್ಯಾನ್ಯರ್ ಗೆ ತುತ್ತಾದವರು ಎರಡನೇ ಬಾರಿಗೆ ಕ್ಯಾನ್ಸರ್ ಗೆ ತುತ್ತಾಗುವುದನ್ನು ತಡೆಗಟ್ಟುವ ನಿಟ್ಟಿನಿಂದ ಮಾತ್ರೆಯೊಂದನ್ನು ಟಾಟಾ ಇನ್ಸ್ಟಿಟ್ಯೂಟ್ ಸಂಸ್ಥೆ ಪರಿಚಯಿಸಿದೆ. ಈ ಮಾತ್ರೆಯ ಬೆಲೆ ಕೇವಲ ನೂರು ರೂಪಾಯಿ ಎಂದು ಸಂಸ್ಥೆ ಮಾಹಿತಿ ನೀಡಿದೆ. ಈ ಮಾತ್ರೆ ವಿಕಿರಣ ಮತ್ತು ಕೀಮೋಥೆರಪಿಯಂತಹ ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು 50% ರಷ್ಟು ಮಾತ್ರೆ ಕಡಿಮೆ ಮಾಡುತ್ತದೆ ಎಂಬುದು ಅವರ ಅಭಿಪ್ರಾಯ.

ಈ ಬಗ್ಗೆ ಮಾಹಿತಿ ನೀಡಿದ ಟಾಟಾ ಸಂಸ್ಥೆಯು, ಕ್ಯಾನ್ಸರ್‌ಗೆ ತುತ್ತಾದವರು ರೇಡಿಯೇಶನ್ ಚಿಕಿತ್ಸೆಗೆ ಒಳಗಾದ ಬಳಿಕ ಕ್ಯಾನ್ಸರ್ ಕೋಶಗಳು ಆರೋಗ್ಯವಂತ ಕೋಶಗಳನ್ನು ಸೇರಿ ಅವುಗಳು ಕ್ಯಾನ್ಸರ್ಗೆ ತುತ್ತಾಗುವಂತೆ ಮಾಡುತ್ತಿದ್ದವು. ಆದರೆ ಈ ಮಾತ್ರೆ ತೆಗೆದುಕೊಳ್ಳುವುದರಿಂದ ವಿಕಿರಣ ಮತ್ತು ಕೀಮೋಥೆರಪಿಯಂತಹ ಚಿಕಿತ್ಸೆಗಳ ಅಡ್ಡಪರಿಣಾಮಗಳನ್ನು 50% ರಷ್ಟು ಮಾತ್ರೆ ಕಡಿಮೆ ಮಾಡುತ್ತದೆ. ಜೊತೆಗೆ ರೋಗಿಯು ಎರಡನೇ ಬಾರಿ ಕ್ಯಾನ್ಸರ್ ಗೆ ತುತ್ತಾಗುವುದು ತಪ್ಪಲಿದೆ. ಮೊದಲು ಕ್ಯಾನ್ಸರ್ ಚಿಕಿತ್ಸೆಗೆ ಲಕ್ಷದಿಂದ ಕೋಟಿ ರೂ. ವೆಚ್ಚವಾಗುತ್ತಿದ್ದು, ಈ ಮಾತ್ರೆಯ ಬೆಲೆ ಕೇವಲ ನೂರು ರೂಪಾಯಿ ಇರಲಿದೆ ಎಂದು ಟಾಟಾ ಸಂಸ್ಥೆ ಹೇಳಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಹಿರಿಯ ಕ್ಯಾನ್ಸರ್ ಶಸ್ತ್ರಚಿಕಿತ್ಸಕ ಡಾ.ರಾಜೇಂದ್ರ ಬದ್ವೆ, ಇದರ ಪ್ರಯೋಗಕ್ಕಾಗಿ ಮೊದಲು ಇಲಿಗಳಲ್ಲಿ ಮಾನವನ ಕ್ಯಾನ್ಸರ್ ಕೋಶಗಳನ್ನು ಒಳಸೇರಿಸಿ ಕ್ಯಾನ್ಸರ್ಗೆ ತುತ್ತಾಗುವಂತೆ ಮಾಡಲಾಯಿತು. ಬಳಿಕ ರೇಡಿಯೇಶನ್ ಚಿಕಿತ್ಸೆ ನೀಡಿ ಕ್ಯಾನ್ಸರ್ ಗುಣಪಡಿಸಿ, ಕೆಲವು ಇಲಿಗಳಿಗೆ ಈ ಮಾತ್ರೆ ತಿನ್ನಿಸಲಾಗಿದೆ. ಮಾತ್ರೆ ತಿಂದ ಇಲಿಗಳಲ್ಲಿ ಎರಡನೇ ಬಾರಿ ಕ್ಯಾನ್ಸರ್ ಕಾಣಿಸಿಕೊಂಡಿಲ್ಲ ಎಂದು ತಿಳಿಸಿದ್ದಾರೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version