ಇವರು ಪುರುಷರಲ್ಲ: ಅತಿ ಉದ್ದದ ಗಡ್ಡ ಬೆಳೆಸಿ ಗಿನ್ನಿಸ್ ದಾಖಲೆ ಬರೆ‍ದ ಅಮೆರಿಕದ ಮಹಿಳೆ

14/08/2023

ಅತೀ ಉದ್ದದ ಗಡ್ಡ ಬೆಳೆಸಿದ ಅಮೆರಿಕದ ಮಹಿಳೆಯೋರ್ವೆ ಗಿನ್ನಿಸ್ ದಾಖಲೆಯನ್ನು ಬರೆದಿದ್ದಾರೆ. ಮಿಚಿಗನ್ ಮೂಲದ ಹನಿಕಟ್, ಗಿನ್ನಿಸ್ ದಾಖಲೆ ಮಾಡಿದವರು. 13ನೇ ವಯಸ್ಸಿಗೆ ಪಿಸಿಒಎಸ್ ಅಂದರೆ ಹಾರ್ಮೋನ್ ಅಸಮತೋಲನ ಸಮಸ್ಯೆಗೆ ಗುರಿಯಾಗಿದ್ದ ಕಾರಣ ಅವರಿಗೆ ಗಡ್ಡದ ಮೇಲೆ ಕೂದಲು ಬೆಳೆಯಲು ಆರಂಭವಾಗಿತ್ತು.

ಸ್ವಲ್ಪ ಸಮಯದವರೆಗೆ ಅದನ್ನು ತೆಗೆಯುತ್ತಿದ್ದ ಅವರು, ಬಳಿಕ ಅರೋಗ್ಯ ಸೌಂದರ್ಯ ಹದಗೆಟ್ಟಿದ್ದರಿಂದ ಸೌಂದರ್ಯ ಕಾಳಜಿ ಬಿಟ್ಟುಬಿಟ್ಟರು. ಬಳಿಕ ಪುರುಷರಂತೆ ಗಡ್ಡ ಬೆಳೆಸಿ ಇದೀಗ 11.8 ಇಂಚು ಗಡ್ಡ ಬೆಳೆಸಿ ಗಿನ್ನಿಸ್ ದಾಖಲೆ ಸೃಷ್ಟಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯ ವೈರಲ್ ಆಗಿದೆ.

ಇತ್ತೀಚಿನ ಸುದ್ದಿ

Exit mobile version