ತಂಗಿಯನ್ನು ಪ್ರೀತಿಸಿದ್ದಕ್ಕೆ ಅಣ್ಣನಿಂದ ಯುವಕನ ಕೊಲೆ!

ಕಲಬುರಗಿ: ತಂಗಿಯನ್ನು ಪ್ರೀತಿಸಿದ್ದಕ್ಕೆ ತನ್ನ ಸಂಬಂಧಿ ಯುವಕನನ್ನು ಯುವತಿಯ ಅಣ್ಣ ಬರ್ಬರವಾಗಿ ಹತ್ಯೆ ನಡೆಸಿರುವ ಆಘಾತಕಾರಿ ಘಟನೆ ಕಲಬುರಗಿ– ಶಾಹಬಾದ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ಪ್ರವೀಣ್ ಬಿರಾದರ್(24) ಹತ್ಯೆಗೀಡಾದ ಯುವಕನಾಗಿದ್ದಾನೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಬೋಮ್ಮನಹಳ್ಳಿ ಗ್ರಾಮದ ಪ್ರವೀಣ್ , ನಗರದ ಓಝಾ ಲೇಔಟ್ ನಲ್ಲಿ ಕುಟುಂಬದ ಜೊತೆ ವಾಸವಾಗಿದ್ದ. ಇತ್ತೀಚೆಗೆ ವಾಟರ್ ಸಪ್ಲೈ ಮಾಡುವ ಆಟೋ ಓಡಿಸುತ್ತಿದ್ದ.
ಹತ್ಯೆ ನಡೆದ ದಿನ ಸ್ನೇಹಿತರು ಕರೆದಿದ್ದಾರೆ ಎಂದು ಹೋಗಿದ್ದ ಪ್ರವೀಣ್ ಕಲಬುರಗಿ-ಶಾಹಬಾದ್ ರಸ್ತೆಯ ನಿರ್ಜನ ಪ್ರದೇಶದಲ್ಲಿ ಹತ್ಯೆಗೀಡಾಗಿದ್ದ.
ಪ್ರೀತಿಸಿದ್ದಕ್ಕೆ ಕೊಲೆ!
ಪ್ರವೀಣ್ ತನ್ನ ಸಂಬಂಧಿ ಯುವತಿಯನ್ನೇ ಪ್ರೀತಿಸುತ್ತಿದ್ದನಂತೆ. ಈ ವಿಚಾರವಾಗಿಯೇ ಹುಡುಗಿ ಮನೆಯವರಿಗೂ ಪ್ರವೀಣ್ ಮಧ್ಯೆ ಗಲಾಟೆ ಆಗಿತ್ತು ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಯುವತಿಯ ಅಣ್ಣ ಮಲ್ಲಿಕಾರ್ಜುನ ತೆಗ್ಗಿನಮನಿ ಹಾಗೂ ಆತನ ಗೆಳೆಯ ಶಾರುಖ್ ಮುಲ್ಲಾ ಪ್ಲಾನ್ ಮಾಡಿ ಹತ್ಯೆ ಮಾಡಿದ್ದಾರೆ ಎನ್ನುವುದು ತಿಳಿದು ಬಂದಿದೆ.
ಮಗನನ್ನು ಕಳೆದುಕೊಂಡ ನೋವಿನಲ್ಲಿರುವ ಬೆನ್ನಲ್ಲೇ ಪ್ರವೀಣ್ ನ ತಾಯಿ ತನ್ನ ನಾದಿನಿ ಹಾಗೂ ನಾದಿನಿ ಮಗನ ವಿರುದ್ಧ ದೂರು ನೀಡಿದ್ದಳು. ಈ ಸಂಬಂಧ ತನಿಖೆ ನಡೆಸಿದ ವೇಳೆ ಕೊಲೆಯ ಅಸಲಿ ಕಾರಣ ಬಯಲಾಗಿದೆ. ಸದ್ಯ ಗುಲ್ಬರ್ಗಾ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/JItjEWZ9e5fBWDL6CkTr97