ಭೀಕರ: ಬೈಕ್ ಶೋರೂಂ ಮಾಲೀಕನನ್ನು ಗುಂಡಿಕ್ಕಿ ಹತ್ಯೆ

11/07/2024

ಹರಿಯಾಣದ ಹಿಸಾರ್ ನ ಹನ್ಸಿಯಲ್ಲಿ ಬೈಕ್ ಶೋರೂಂ ಮಾಲೀಕರನ್ನು ಅವರ ಅಂಗಡಿಯೊಳಗೆ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದ ಘಟನೆ ‌ನಡೆದಿದೆ. ಹತ್ಯೆಗೀಡಾಡಾ ವ್ಯಕ್ತಿ ರವೀಂದರ್ ಸೈನಿ ಮಾಜಿ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ನೇತೃತ್ವದ ಜನನಾಯಕ್ ಜನತಾ ಪಕ್ಷ (ಜೆಜೆಪಿ) ಯೊಂದಿಗೆ ಸಂಬಂಧ ಹೊಂದಿದ್ದರು.

ದಾಳಿಕೋರರು ಸೈನಿ ಅವರ ಶೋರೂಂಗೆ ಬಂದು ಅವರ ಮೇಲೆ ನಾಲ್ಕರಿಂದ ಐದು ಸುತ್ತು ಗುಂಡು ಹಾರಿಸಿದ್ದಾರೆ. 40ರ ಹರೆಯದ ಸೈನಿ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳು ನಾಲ್ಕು ದಾಳಿಕೋರರು ಸಂಚರಿಸುತ್ತಿದ್ದ ಬೈಕ್ ಅನ್ನು ತೋರಿಸುತ್ತದೆ. ಇವರೆಲ್ಲಾ ಸೈನಿಯನ್ನು ಕೊಂದ ಸ್ವಲ್ಪ ಸಮಯದ ನಂತರ ಅವರೆಲ್ಲರೂ ಪರಾರಿಯಾಗಿದ್ದಾರೆ. ದಾಳಿಕೋರರಲ್ಲಿ ಒಬ್ಬನನ್ನು ರೋಹ್ಟಕ್ ನಿವಾಸಿ ಸುಮಿತ್ (ಕಪ್ಪು ಟೀ ಶರ್ಟ್ ಧರಿಸಿದ್ದ) ಎಂದು ಗುರುತಿಸಲಾಗಿದೆ.
ಈ ಪ್ರಕರಣದ ಪ್ರಮುಖ ಶಂಕಿತ ವಿಕ್ಕಿ ನೆಹ್ರಾ (ಬಿಳಿ ಅಂಗಿಯಲ್ಲಿ ಕಾಣಿಸಿಕೊಂಡಿದ್ದಾನೆ) ಹರಿಯಾಣದ ಜೈಲಿನಲ್ಲಿದ್ದ. 2017 ರ ಪ್ರಕರಣವೊಂದರಲ್ಲಿ ಸೈನಿಯ ಶೋರೂಂನಲ್ಲಿ ಜಗಳ ನಡೆದಿತ್ತು. ಆ ಬಳಿಕ ನೆಹ್ರಾಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ

Exit mobile version